Gdag: ಅತ್ಯಾಚಾರ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾದ: ಅಪೂರ್ವ

 ನನ್ನ ಮದುವೆ ಹಿಂದೆ ‘ಲವ್‌ ಜಿಹಾದ್‌’ ಉದ್ದೇಶ ಅಡಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾದ. ಬುರ್ಕಾ, ಹಿಜಾಬ್‌ ಹಾಕಬೇಕು, ಮಾಂಸ ತಿನ್ನಬೇಕು, ನಮಾಜ್‌ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಅಪೂರ್ವ ಪುರಾಣಿಕ್‌ ಅಲಿಯಾಸ್‌ ಅರ್ಫಾಬಾನು ತನ್ನ ಗಂಡನ ವಿರುದ್ಧ  ಗಂಭೀರ ಆರೋಪ ಮಾಡಿದ್ದಾರೆ. 
 

First Published Mar 16, 2022, 3:18 PM IST | Last Updated Mar 16, 2022, 3:18 PM IST

ಗದಗ (ಮಾ. 16): ನನ್ನ ಮದುವೆ ಹಿಂದೆ ‘ಲವ್‌ ಜಿಹಾದ್‌’ ಉದ್ದೇಶ ಅಡಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾದ. ಬುರ್ಕಾ, ಹಿಜಾಬ್‌ ಹಾಕಬೇಕು, ಮಾಂಸ ತಿನ್ನಬೇಕು, ನಮಾಜ್‌ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಪತಿ ಇಜಾಜ್‌ನಿಂದ 23 ಬಾರಿ ಮಚ್ಚಿನಿಂದ ಹಲ್ಲೆಗೆ ಒಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವ ಪುರಾಣಿಕ್‌ ಅಲಿಯಾಸ್‌ ಅರ್ಫಾಬಾನು ತನ್ನ ಗಂಡನ ವಿರುದ್ಧ  ಗಂಭೀರ ಆರೋಪ ಮಾಡಿದ್ದಾರೆ. 

ಕಾಲೇಜಿಗೆ ಆಗಾಗ ಇಜಾಜ್‌ ಆಟೋದಲ್ಲಿ ಹೋಗುತ್ತಿದ್ದೆ. ಒಂದು ದಿನ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ತಾಯಿ, ಕುಟುಂಬಸ್ಥರಿಗೆ ವಿಡಿಯೋ ತೋರಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದ. ಅನಿವಾರ್ಯವಾಗಿ ಮದುವೆಯಾದೆ. ಆ ಬಳಿಕ ತನ್ನ ಮತ್ತೊಂದು ಮುಖ ತೋರಿಸಲು ಆರಂಭಿಸಿದ. ಮತಾಂತರ ಮಾಡಿಸಿದ, ಆತನ ಜನರಿರುವ ಓಣಿಗೆ ಕರೆದೊಯ್ದು ಅವರ ಸಂಸ್ಕೃತಿ ಪಾಲಿಸುವಂತೆ, ಮಾಂಸ ಸೇವಿಸುವಂತೆ, ಬುರ್ಕಾ, ಹಿಜಾಬ್‌ ಧರಿಸುವಂತೆ ಒತ್ತಾಯಿಸಿದ. ತನ್ನ ಮಾತು ಕೇಳುವಂತೆ ಮಾಡುತ್ತಿದ್ದ. ಈ ವಿಚಾರಗಳಿಗಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾರೆ.