'ಹೀರೋ' ಸ್ಟೈಲ್‌ನಲ್ಲಿ ಬೇರೆಯವರ ಚಿತ್ರ ತೆಗೆಯುತ್ತಿದ್ದ ಫೋಟೋಗ್ರಾಫರ್‌ ತನ್ನ ಸಂಸಾರಕ್ಕೇ ವಿಲನ್‌ ಆದ!

ಯಾವ ಹೀರೋ ಬೇಕು, ಅದೇ ಥರ ಚಿತ್ರ ತೆಗೆದುಕೊಡ್ತೇನೆ.. ಅನ್ನೋ ಫೋಟೋಗ್ರಾಫರ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಸಂಸಾರಕ್ಕೆ ವಿಲನ್‌ ಆಗಿ ಬಿಟ್ಟ. ಅನೈತಿಕ ಸಂಬಂಧ ಬೇರೆಯವರಿಗೆ ತಿಳಿಯುತ್ತದೆ ಎನ್ನುವ ಕಾರಣಕ್ಕೆ ತಾಳಿ ಕಟ್ಟಿದ ಹೆಂಡತಿಯನ್ನೇ ದಾರುಣವಾಗಿ ಕೊಂದು ಹಾಕಿದ.
 

First Published Apr 13, 2023, 9:59 PM IST | Last Updated Apr 13, 2023, 9:58 PM IST

ಚಿತ್ರದುರ್ಗ (ಏ.13): ತನ್ನ ಬದುಕಿಗೆ ಹೀರೋ ಆಗಬೇಕಿದ್ದ ಫೋಟೋಗ್ರಾಫರ್‌ ಒಬ್ಬ, ಬೇರಯವಳ ಮೋಹಕ್ಕೆ ಬಿದ್ದು ವಿಲನ್‌ ಆಗಿರುವ ಕಥೆ ಇದು. ಹೆಂಡತಿಯನ್ನು ದಾರುಣವಾಗಿ ಕೊಂದು ಅದು ಆತ್ಮಹತ್ಯೆ ಎಂದು ಬಣ್ಣ ಕಟ್ಟುವ ಪ್ರಯತ್ನ ಮಾಡಿದ್ದವನೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.

27 ವರ್ಷದ ರೋಜಾ ಎನ್ನುವ ಗೃಹಿಣಿಯನ್ನು ಹಿಂಸೆ ಮಾಡಿ ಕೊಲೆ ಮಾಡಿದ ಯರಿಸ್ವಾಮಿ ಇಂದು ಜೈಲು ಕಂಬಿ ಎಣಿಸುತ್ತಿದ್ದಾನೆ. ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಚೆನ್ನಾಗಿ ನಡೆಯುತ್ತಿದ್ದ ಈ ಸಂಸಾರಕ್ಕೆ ಇನ್ನೊಬ್ಬಳು ಮಹಿಳೆ ಎಂಟ್ರಿಕೊಟ್ಟಿದ್ದೇ ದುರಂತಕ್ಕೆ ಕಾರಣವಾಗಿದೆ.

ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ

ಬೇರೊಬ್ಬಳ ಸಂಬಂಧ ಗೊತ್ತಾಗುತ್ತಲೇ ಗಲಾಟೆ ಮಾಡಿದ ಹೆಂಡತಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಇದನ್ನು ಆತ್ಮಹತ್ಯೆ ಎಂದು ತೋರಿಸಲು ಮುಂದಾಗಿದ್ದಾನೆ. ಈ ನಡುವೆ ರೋಜಾಳ ಸಂಬಂಧಿಕರು ಯರಿಸ್ವಾಮಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 

Video Top Stories