Hassan: ಮಕ್ಕಳಿಲ್ಲದ ಮಗಳ ಮಡಿಲು ತುಂಬಲು ಬೇರೊಬ್ಬರ ಗಂಡು ಮಗು ಕದ್ದ ಅಮ್ಮ..!

ಮಕ್ಕಳಿಲ್ಲದ ಮಗಳಿಗೆ ಗಂಡು ಮಗು ಕೊಡಿಸಲು, ನಡುರಾತ್ರಿ ಹಸುಗೂಸನ್ನು ಅಪಹರಿಸಿದ್ದ ಖತರ್ನಾಕ್ ಗ್ಯಾಂಗ್ ಅಂದರ್ ಆಗಿದೆ. ಹಾಸನ (Hassan) ಜಿಲ್ಲೆಯ ಕಣಿಯಾರು ಗ್ರಾಮದ ನಿವಾಸಿಗಳಾದ ಶೈಲಜಾ ಹಾಗೂ ಅವರ ಕುಟುಂಬಸ್ಥರು ಕಳ್ಳತನಕ್ಕಿಳಿದವರು.

First Published Mar 24, 2022, 2:15 PM IST | Last Updated Mar 24, 2022, 2:19 PM IST

ಹಾಸನ (ಮಾ. 24): ಮಕ್ಕಳಿಲ್ಲದ ಮಗಳಿಗೆ ಗಂಡು ಮಗು ಕೊಡಿಸಲು, ನಡುರಾತ್ರಿ ಹಸುಗೂಸನ್ನು ಅಪಹರಿಸಿದ್ದ ಖತರ್ನಾಕ್ ಗ್ಯಾಂಗ್ ಅಂದರ್ ಆಗಿದೆ. ಹಾಸನ (Hassan) ಜಿಲ್ಲೆಯ ಕಣಿಯಾರು ಗ್ರಾಮದ ನಿವಾಸಿಗಳಾದ ಶೈಲಜಾ ಹಾಗೂ ಅವರ ಕುಟುಂಬಸ್ಥರು ಕಳ್ಳತನಕ್ಕಿಳಿದವರು.

ಮದುವೆಯಾಗಿ 5 ವರ್ಷವಾದರೂ ಮಗಳು ಸುಶ್ಮಿತಾಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಅರಕಲಗೋಡು ಸರ್ಕಾರಿ ಆಸ್ಪತ್ರೆಗೆ ನರ್ಸ್ ವೇಷದಲ್ಲಿ ಹೋಗಿ, ಅಸ್ಸಾಂ ಮೂಲದ ಯಾಸ್ಮಿನ್-ಸಿರಾಜ್ ದಂಪತಿಯ ಮಗುವನ್ನು ಅಪಹರಿಸುತ್ತಾರೆ. ಸಿಸಿಟಿವಿ, ಮೊಬೈಲ್ ಲೊಕೇಶನ್ ಆಧರಿಸಿ ಮೂವರನ್ನು ಬಂಧಿಸಲಾಗಿದೆ.