Hassan: ಪತ್ನಿಯಿಂದ ಟಾರ್ಚರ್: ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ
ಪತ್ನಿ ಹಾಗೂ ಅವರ ಪೋಷಕರ ಕಿರುಕುಳ ಆರೋಪ ಹಿನ್ನಲೆಯಲ್ಲಿ ಸೆಲ್ಫಿ ವೀಡಿಯೊ ಮಾಡಿ ವಿಷ ಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿನಯ್ (40) ಮೃತಪಟ್ಟ ವ್ಯಕ್ತಿ.
ಹಾಸನ (ಜು.12): ಪತ್ನಿ ಹಾಗೂ ಅವರ ಪೋಷಕರ ಕಿರುಕುಳ ಆರೋಪ ಹಿನ್ನಲೆಯಲ್ಲಿ ಸೆಲ್ಫಿ ವೀಡಿಯೊ ಮಾಡಿ ವಿಷ ಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿನಯ್ (40) ಮೃತಪಟ್ಟ ವ್ಯಕ್ತಿ. ವಿಷ ಸೇವಿಸುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ಪತ್ನಿ ಹಾಗು ಅವರ ಕುಟುಂಬ ಸದಸ್ಯರ ವಿರುದ್ದ ಆರೋಪ ಮಾಡಿರೊ ವಿನಯ್, ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣ. ನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ಆದರೂ ಅವರೆಲ್ಲಾ ಬದಲಾಗಿಲ್ಲ.
ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ. ಕೈಯಲ್ಲಿ ವಿಷದ ಬಾಟಲಿ ಹಿಡಿದು ವಿನಯ್ ವಿಡಿಯೋ ಮಾಡಿದ್ದಾರೆ. ಅಕ್ಕ, ಅಮ್ಮ, ಬಾವ,ತಮ್ಮ, ನಾದಿನಿ ನನ್ನನ್ನು ಕ್ಷಮಿಸಿಬಿಡಿ. ಆಶಾ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಡಿಯೋ ಮಾಡಿ ಜುಲೈ.9 ರಂದು ವಿನಯ್ ವಿಷ ಸೇವಿಸಿದ್ದಾನೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನಯ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಆಶಾ ಹಾಗೂ ಅವರ ಮನೆಯವರ ವಿರುದ್ಧ ವಿನಯ್ ಹಾಗೂ ಅವರ ಪೋಷಕರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು 2011ರಲ್ಲಿ ವಿನಯ್ ಹಾಗೂ ಆಶಾ ವಿವಾಹವಾಗಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.