Asianet Suvarna News Asianet Suvarna News

ಶ್ರೀ ಅನಂತ ಪದ್ಮನಾಭನ ದರ್ಶನ ಪಡೆದ ಟೀಂ ಇಂಡಿಯಾ ಆಟಗಾರರು..!

ಟೀಂ ಇಂಡಿಯಾ ಕ್ರಿಕೆಟಿಗರು ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯಕ್ಕೆ ಭೇಟಿ
ಭಾರತ-ಲಂಕಾ 3ನೇ ಏಕದಿನ ಪಂದ್ಯಕ್ಕೆ ಕೇರಳದ ತಿರುವನಂತಪುರಂ ಮೈದಾನ ಆತಿಥ್ಯ
3ನೇ ಏಕದಿನ ಪಂದ್ಯಕ್ಕೂ ಮುನ್ನ ತಿರುವಂತಪುರದ ಪ್ರಸಿದ್ದ ದೇವಾಲಯಕ್ಕೆ ಭೇಟಿ
ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕುಲ್ದೀಪ್ ಯಾದವ್ ಸೇರಿ ಹಲವು ಮಂದಿ ಭಾಗಿ

ತಿರುವನಂತಪುರಂ(ಜ.15): ಕೇರಳದ ಅತ್ಯಂತ ಪ್ರಸಿದ್ದ ದೇವಾಲಯವಾದ ಶ್ರೀ ಅನಂತ ಪದ್ಯನಾಭ ದೇಗುಲಕ್ಕೆ ಟೀಂ ಇಂಡಿಯಾ ಆಟಗಾರರು ಶನಿವಾರ ಭೇಟಿ ನೀಡಿ ದರ್ಶನ ಪಡೆದರು. ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೆ ಇಲ್ಲಿನ ಗ್ರೀನ್‌ಫೀಲ್ಡ್‌ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

ಟೀಂ ಇಂಡಿಯಾ ಕ್ರಿಕೆಟಿಗರಾದ ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಹಲ್, ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಸೇರಿದಂತೆ ಹಲವು ಮಂದಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.