Acharya Song Controversy: ವಿವಾದ ಹುಟ್ಟು ಹಾಕಿದ ಮೆಗಾಸ್ಟಾರ್ ಚಿತ್ರದ ಐಟಂ ಸಾಂಗ್​

ಇತ್ತೀಚೆಗೆ ತೆರೆಕಂಡ 'ಪುಷ್ಪ' ಚಿತ್ರದಲ್ಲಿ 'ಊ ಅಂಟಾವಾ' ಹಾಡಿಗೆ ನಟಿ ಸಮಂತಾ ಹೆಜ್ಜೆ ಹಾಕಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದಿಂದ ಸಿನಿಮಾದ ಹೈಪ್​ ಹೆಚ್ಚಿತ್ತು. ಇದೇ ರೀತಿ ಹೈಪ್​ ಸೃಷ್ಟಿ ಮಾಡುವ ಭರದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಚಿತ್ರ ವಿವಾದ ಸೃಷ್ಟಿ ಮಾಡಿದೆ. 

First Published Jan 9, 2022, 2:15 PM IST | Last Updated Jan 9, 2022, 2:15 PM IST

ಇತ್ತೀಚೆಗೆ ತೆರೆಕಂಡ 'ಪುಷ್ಪ' (Pushpa) ಚಿತ್ರದಲ್ಲಿ 'ಊ ಅಂಟಾವಾ' ಹಾಡಿಗೆ ನಟಿ ಸಮಂತಾ (Samantha) ಹೆಜ್ಜೆ ಹಾಕಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದಿಂದ ಸಿನಿಮಾದ ಹೈಪ್​ ಹೆಚ್ಚಿತ್ತು. ಇದೇ ರೀತಿ ಹೈಪ್​ ಸೃಷ್ಟಿ ಮಾಡುವ ಭರದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ 'ಆಚಾರ್ಯ'  (Acharya) ಚಿತ್ರ ವಿವಾದ ಸೃಷ್ಟಿ ಮಾಡಿದೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 'ಆಚಾರ್ಯ' ಸಿನಿಮಾ ಫೆಬ್ರವರಿ 4ಕ್ಕೆ ತೆರೆಗೆ ಬರಲಿದೆ. ಆದರೆ ಕೊರೋನಾ (Corona) ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿ ಏನಿಲ್ಲ. 

Acharya Trailer: ತಂದೆ-ಮಗನ ಜುಗಲ್ಬಂದಿಗೆ ಮೆಗಾ ಫ್ಯಾನ್ಸ್ ಫಿದಾ!

ಹಾಗಾಗಿ ಚಿತ್ರತಂಡ ನಿಧಾನಕ್ಕೆ ಚಿತ್ರದ ಪ್ರಚಾರ ಆರಂಭಿಸಿದೆ. ಇತ್ತೀಚೆಗೆ ಚಿತ್ರತಂಡ ವಿಶೇಷ ಹಾಡನ್ನು ಬಿಡುಗಡೆ ಮಾಡಿತ್ತು. ಈ ಹಾಡಿಗೆ ಇದೀಗ ವಿವಾದ ಅಂಟಿದೆ. ಹೌದು! 'ಸಾನಾ ಕಷ್ಟಂ' (Saana Kastam) ಲಿರಿಕಲ್​ ಸಾಂಗ್​ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಆರ್​ಎಂಪಿ ವೈದ್ಯರಿಗೆ (RMP Doctors) ನೋವು ತರುವ ರೀತಿಯಲ್ಲಿ ಸಾಹಿತ್ಯ ಬರೆಯಲಾಗಿದೆ. ಮಹಿಳೆಯರನ್ನು ಸ್ಪರ್ಶಿಸುವ ಅವಕಾಶವನ್ನು ಪಡೆಯಲು ಹುಡುಗರು ಆರ್​ಎಂಪಿ ವೈದ್ಯರಾಗುತ್ತಿದ್ದಾರೆ ಎನ್ನುವ ಸಾಲಿದೆ. ಇದಕ್ಕೆ ತೆಲಂಗಾಣ ವೈದ್ಯರು ದೂರು ದಾಖಲು ಮಾಡಿದ್ದಾರೆ. ಇನ್ನು ಕೊರಟಾಲ ಶಿವ (Koratala Siva) ನಿರ್ದೇಶನದಲ್ಲಿ 'ಆಚಾರ್ಯ' ಸಿನಿಮಾ ಮೂಡಿ ಬಂದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment