Asianet Suvarna News Asianet Suvarna News

Acharya Trailer: ತಂದೆ-ಮಗನ ಜುಗಲ್ಬಂದಿಗೆ ಮೆಗಾ ಫ್ಯಾನ್ಸ್ ಫಿದಾ!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ ಹೊಸ ವರ್ಷಕ್ಕೆ ಬಂದ 'ಆಚಾರ್ಯ' ಹೊಸ ಟ್ರೇಲರ್. ಅದ್ಧೂರಿ ಮೇಕಿಂಗ್, ಭರ್ಜರಿ ಆಕ್ಷನ್ ಖಡಕ್ ಡೈಲಾಗ್‌ಗಳು ಟ್ರೇಲರ್‌ನಲ್ಲಿ ಮೇಳೈಸಿವೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ 'ಆಚಾರ್ಯ' (Acharya) ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ ಹೊಸ ವರ್ಷಕ್ಕೆ ಬಂದ 'ಆಚಾರ್ಯ' ಹೊಸ ಟ್ರೇಲರ್ (Trailer). ಹೊಸ ವರ್ಷಕ್ಕೆ ಬಂದಿರುವ ಒಂದು ನಿಮಿಷದ ಈ ಟ್ರೇಲರ್ ನೋಡಿದ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ (Ram Charan) ಫ್ಯಾನ್ಸ್ ಅಕ್ಷರಶ ಥ್ರಿಲ್ ಆಗಿದ್ದಾರೆ. ಅದ್ಧೂರಿ ಮೇಕಿಂಗ್, ಭರ್ಜರಿ ಆಕ್ಷನ್ ಖಡಕ್ ಡೈಲಾಗ್‌ಗಳು ಟ್ರೇಲರ್‌ನಲ್ಲಿ ಮೇಳೈಸಿವೆ.

ಮೆಗಾ ಸ್ಟಾರ್ ಚಿರಂಜೀವಿ 'ಆಚಾರ್ಯ' ರಿಲೀಸ್ ಡೇಟ್‌ ಮುಂದೂಡಿಕೆ!

ಅಪ್ಪ ಮಗನ ಜುಗಲ್ಬಂದಿ ನೋಡೋದೆ ಹಬ್ಬ ಅನ್ನಿಸುತ್ತೆ. ರಾಮ್ ಚರಣ್ ಈ ಸಿನಿಮಾದಲ್ಲಿ ‘ಸಿದ್ದ’ ಅನ್ನೋ ರೋಲ್ ಮಾಡಿದ್ದು, ಈ ಟ್ರೇಲರ್ ನೋಡುತ್ತಿದ್ದರೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತನ್ನ ತಂದೆಯನ್ನೇ ಮೀರಿಸುವಂತೆ ಕಾಣಿಸುತ್ತಾರೆ. 'ಆಚಾರ್ಯ' ಸಿನಿಮಾದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ (Pooja Hegde) ಅಭಿನಯಿಸಿದ್ದು, ಕೊರಟಾಲ ಶಿವ (Koratala Siva) ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಅಪ್ಪ ಮಗನ ಜುಗಲ್ಬಂದಿಯ 'ಆಚಾರ್ಯ' ಸಿನಿಮಾ 2022 ರ ಫೆಬ್ರವರಿ 14ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories