Asianet Suvarna News Asianet Suvarna News

Samantha: ಸ್ಕೀಯಿಂಗ್ ಪಯಣಕ್ಕೆ ದುಬಾರಿ ಜಾಕೆಟ್ ಖರೀದಿಸಿದ ಸಮಂತಾ

'ಪುಷ್ಪ' ಸಿನಿಮಾದ 'ಊ ಅಂಟಾವಾ' ಹಾಡಿಗೆ ನಟಿ  ಸಮಂತಾ ಹಾಕಿದ ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ದೇಶ-ವಿದೇಶ ಸುತ್ತುತ್ತಿದ್ದಾರೆ. ಇತ್ತೀಚೆಗೆ ಅವರು ಸ್ವಿಜರ್​ಲೆಂಡ್​ಗೆ ತೆರಳಿದ್ದರು.

First Published Feb 2, 2022, 2:29 PM IST | Last Updated Feb 2, 2022, 2:29 PM IST

ನಟಿ  ಸಮಂತಾ (Samantha) ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ಪ್ಯಾನ್ ಇಂಡಿಯಾ 'ಪುಷ್ಪ' (Pushpa) ಚಿತ್ರದಲ್ಲಿ ಹಾಕಿದ 'ಊ ಅಂಟಾವಾ' ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ದೇಶ-ವಿದೇಶ ಸುತ್ತುತ್ತಿದ್ದಾರೆ. ಇತ್ತೀಚೆಗೆ ಅವರು ಸ್ವಿಜರ್​ಲ್ಯಾಂಡ್​ಗೆ (Switzerland) ತೆರಳಿದ್ದರು. ಅಲ್ಲಿ ಹಾಯಾಗಿ ಸಮಯ ಕಳೆದು ಬಂದಿದ್ದರು. ಹಿಮಚ್ಛಾದಿತ ಪ್ರದೇಶಗಳಲ್ಲಿ ಸ್ಕೀಯಿಂಗ್​ ಮಾಡಲಾಗುತ್ತದೆ. 

ಸೈಲೆಂಟ್‌ ಆಗಿ ಡಿವೋರ್ಸ್‌ ಪೋಸ್ಟ್ ಡಿಲೀಸ್ ಮಾಡಿದ ನಟಿ Samantha!

ಅಂದರೆ, ಕಾಲಿಗೆ ಉದ್ದನೆಯ ಹಲಗೆ ರೀತಿಯ ವಸ್ತುವನ್ನು ಕಟ್ಟಿಕೊಂಡು, ಕೈನಲ್ಲಿ ಕೋಲು ಹಿಡಿದುಕೊಂಡು ಹಿಮದಲ್ಲಿ ಜಾರಿ ಹೋಗುತ್ತಾರೆ. ಇದನ್ನು ಸಮಂತಾ ಮಾಡಿದ್ದಾರೆ. ಇದಕ್ಕಾಗಿ ಅವರು ದುಬಾರಿ ಜಾಕೆಟ್​ ಖರೀದಿಸಿದ್ದಾರೆ. ಹೌದು! ಸಮಂತಾ ಕಪ್ಪು​ ಬಣ್ಣದ Moncler ಬ್ರ್ಯಾಂಡ್​ನ ಜಾಕೆಟ್ (Jacket)​ ಖರೀದಿಸಿದ್ದು, ಇದಕ್ಕೆ ಅವರು 1.20 ಲಕ್ಷ ರೂಪಾಯಿ ನೀಡಿದ್ದಾರೆ. ಒಟ್ಟಿನಲ್ಲಿ ಸಮಂತಾ ಸ್ವಿಜರ್​ಲ್ಯಾಂಡ್​ನಲ್ಲಿ ಹಾಲಿಡೇ ಎಂಜಾಯ್​ ಮಾಡಿಕೊಂಡು ಈ ಮಧ್ಯೆ ಕೆಲವು ಸಾಹಸಗಳನ್ನು ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment