ಬಿಟೌನ್‌ನಲ್ಲಿ ಸೌತ್ ಸ್ಟಾರ್‌ಗಳ ದರ್ಬಾರ್, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿವೆ ಸೌತ್ ಚಿತ್ರಗಳು.!
ಸೌತ್ ಇಂಡಿಯಾ (South India) ಸಿನಿಮಾಗಳ ಅಬ್ಬರ ಹೆಚ್ಚಾದಂತೆಲ್ಲ ಬಾಲಿವುಡ್ ತನ್ನ ಚಾರ್ಮ್ (Charm) ಕಳೆದುಕೊಳ್ಳುತ್ತಿದೆ. ಉತ್ತರ ಭಾರತದ ಪ್ರೇಕ್ಷಕರು ಕೂಡ ಈಗ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಸೌತ್ ಇಂಡಿಯಾ (South India) ಸಿನಿಮಾಗಳ ಅಬ್ಬರ ಹೆಚ್ಚಾದಂತೆಲ್ಲ ಬಾಲಿವುಡ್ ತನ್ನ ಚಾರ್ಮ್ (Charm) ಕಳೆದುಕೊಳ್ಳುತ್ತಿದೆ. ಉತ್ತರ ಭಾರತದ ಪ್ರೇಕ್ಷಕರು ಕೂಡ ಈಗ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು 2015ರಿಂದ ಶುರುವಾದ ಸೌತ್ ಸಿನಿಮಾಗಂಗ ಹೊಸ ಚಾರ್ಮ್. 2015ರಲ್ಲಿ ರಾಜಮೌಳಿ ಹಾಗು ಪ್ರಭಾಸ್ ಬಿಟೌನ್ ಬಾಕ್ಸಾಫೀಸ್ಅನ್ನ ದೋಚಬಹುದು ಅಂತ ತೋರಿಸಿಕೊಟ್ರು. ಅಲ್ಲಿಂದ ಶುರುವಾದ ಸೌತ್ ಸಿನಿ ರಂಗದ ಸಕ್ಸಸ್ ಜರ್ನಿ, ಬಾಹುಬಲಿ2, ಕೆಜಿಎಫ್ ಚಾಪ್ಟರ್ 1, ಪುಷ್ಪ, ಆರ್ಆರ್ಆರ್, ಕೆಜಿಎಫ್ ಚಾಪ್ಟರ್ 2 ನಿಂದಲೂ ಮುಂದುವರೆದಿದೆ.
ಕಿಚ್ಚನ ವಿಕ್ರಾಂತ್ ರೋಣ (Vikrant Rona) ಉಪ್ಪಿಯ ಕಬ್ಜ (kabja)ಪ್ರಭಾಸ್ ಸಲಾರ್ ಸಿನಿಮಾಗಳು ಕೂಡ ಇದನ್ನ ಮುಂದುವರೆಸಲಿವೆ. ಈಗಾಗಲೇ ಬಾಲಿವುಡ್‌ನಲ್ಲಿ ಸೌತ್ ಸಿನಿಮಾಗಳ ಯಶಸ್ಸು ದೊಡ್ಡ ಮಟ್ಟದಲ್ಲಿದೆ. ಬಾಹುಬಲಿ 650 ಕೋಟಿ ರೂ ಗಳಿಸಿದೆ. ಬಾಹುಬಲಿ-2, 1810 ಕೋಟಿ ಗಳಿಸಿತ್ತು. ಕೆಜಿಎಫ್-1 ಸಿನಿಮಾ 250ರಿಂದ 300 ಕಲೆಕ್ಷನ್ ಮಾಡಿದ್ರೆ, ಪುಷ್ಪ 365 ಕೋಟಿ ಗಳಿಸಿತ್ತು. ಈಗ ಆರ್ ಆರ್ ಆರ್ ಸಿನಿಮಾ 1180 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ನಲ್ಲಿ ಮುನ್ನುಗ್ಗುತ್ತಿದೆ. ಇದರ ಜೊತೆ ಕೆಜಿಎಫ್ ಚಾಪ್ಟರ್-2 ಕೂಡ ಸೇರಿಕೊಂಡಿದ್ದು, ಈ ಸಿನಿಮಾದ ಒಂದು ದಿನದ ಕಲೆಕ್ಷನ್ 240 ಕೋಟಿಗೂ ಅಧಿಕ ಅಂತ ಹೇಳಲಾಗ್ತಿದೆ.
ಹಿಂದಿ ಚಿತ್ರರಂಗದ ಸ್ಟಾರ್ಗಳ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದ ಬಾಲಿವುಡ್ನ ಸ್ಟಾರ್ ಪ್ರೊಡ್ಯೂಸರ್ಸ್ ಈಗ ದಕ್ಷಿಣ ಭಾರತದ ಹೀರೋಗಳ ಕಡೆ ತಿರುಗಿದ್ದಾರೆ. ಬಾಲಿವುಡ್ನ ಬಿಗ್ ಪ್ರೊಡ್ಯೂಷರ್ ಬೋನಿ ಕಪೂರ್, ತಮಿಳು ಸೂಪರ್ ಸ್ಟಾರ್ ತಲಾ ಅಜಿತ್ರ ವಲಿಮೈ ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಸಕ್ಸಸ್ ಆಗಿದ್ದಾರೆ. ಇದರ ಜೊತೆಗೆ ಹಿಂದಿಯಲ್ಲಿ ಪುಷ್ಪ ಹಾಗು ಕೆಜಿಎಫ್-2 ಸಿನಿಮಾ ಬಿಡುಗಡೆ ಮಾಡಿರೋದು ಫರಾನ್ ಅಖ್ತರ್ ಹಾಗು ಅನೀಲ್ ತಡಾನಿ. ಅಷ್ಟೆ ಅಲ್ಲ ಬಾಲಿವುಡ್ ಟಾಪ್ ಹೀರೋಯಿನ್‌ಗಳು ಸೌತ್ ಸ್ಟಾರ್ಗಳಿಗೆ ನಾಯಕಿಯರಾಗುತ್ತಿದ್ದಾರೆ. ಸಲ್ಮಾನ್ ಖಾನ್ ರವೀನಾ ಟಂಡನ್, ಸಂಜಯ್ ದತ್‌ರಂತಹ ದಿಗ್ಗಜ ನಟರು ತಮ್ಮ ಚಾರ್ಮ್ ಉಳಿಸಿಕೊಳ್ಳಲು ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಟೋಟಲಿ ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಈಗ ಬಾಲಿವುಡ್ ಗಪ್ಚುಪ್ ಆಗಿದೆ.