Asianet Suvarna News Asianet Suvarna News

‘ಸಲಾರ್’ ನೌಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್....?

ಯಶ್ ಮುಂದಿನ ಸಿನಿಮಾ ಯಾವುದು ? ಎಂದು ಕೇಳುವವರಿಗೆ ಸಧ್ಯಕ್ಕೆ ಉತ್ತರ ಸಿಕ್ಕಿದೆ. ಮತ್ತೊಮ್ಮೆ ಕೆಜಿಎಫ್ ಜೋಡಿ ಯಶ್ ಪ್ರಶಾಂತ್ ನೀಲ್ ಜೊತೆ ಆಗುತ್ತಿದ್ದಾರೆ.
 

First Published Mar 13, 2023, 5:04 PM IST | Last Updated Mar 13, 2023, 5:05 PM IST

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಮಂದಿನ ಚಿತ್ರದ ತಯಾರಿಯನ್ನ ಭರ್ಜರಿಯಾಗಿಯೇ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಬೇಕಾದಂತ ಸಿದ್ದತೆ ಆಗುತ್ತಿದೆ. ಅದರ ಮಧ್ಯೆ ಸಲಾರ್ ಚಿತ್ರದಿಂದ ಒಂದು ಹೊಸ ಮಾಹಿತಿ ಕೂಡ ಹೊರ ಬಂದಿದೆ. ಸಲಾರ್ ಚಿತ್ರದ ಗೆಸ್ಟ್ ರೋಲ್‌ಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಯಶ್ ಗೆಸ್ಟ್ ರೋಲ್ ಮಾಡ್ತಿರೋದು ಪಕ್ಕಾ ಆಗಿದೆ.  ಸಲಾರ್ ಚಿತ್ರದಲ್ಲಿ ಏಳು ನಿಮಿಷದ ಗೆಸ್ಟ್ ರೋಲ್ ಮಾಡುತ್ತಿದ್ದಾರೆ  ಎಂದು ಹೇಳಲಾಗುತ್ತಿದೆ.