Asianet Suvarna News Asianet Suvarna News

Rajinikanth ವೈರಲ್‌ ಫೋಟೋ ಹಿಂದಿನ ರಹಸ್ಯ ಬಯಲು..! ಅಸಲಿಗೆ ಸತ್ಯ ಏನ್‌ ಗೊತ್ತಾ..?

ಕೆಲವೊಂದ್ ಸಾರಿ ಹೇಗೆಲ್ಲಾ ಆಗ್ತಿರುತ್ತೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಚಿತ್ರದಲ್ಲಿ ರಜನಿ ಅವತಾರ ನೋಡಿ. ಒಂದು ಕ್ಷಣ ಅವರ ಅಭಿಮಾನಿಗಳು ಶಾಕ್ ಆಗಿದ್ದರು. 

First Published Oct 22, 2023, 12:39 PM IST | Last Updated Oct 22, 2023, 12:39 PM IST

ಕೆಲವೊಂದ್ ಸಾರಿ ಹೇಗೆಲ್ಲಾ ಆಗ್ತಿರುತ್ತೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಚಿತ್ರದಲ್ಲಿ ರಜನಿ ಅವತಾರ ನೋಡಿ. ಒಂದು ಕ್ಷಣ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಅಲ್ಲದೆ, ಸ್ಕ್ರೀನ್ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ...? ಅಂತ ಅನುಮಾನ ಪಟ್ಟಿದ್ರು. ಇದೀಗ ಆ ಫೋಟೋದಲ್ಲಿದ್ದ ವ್ಯಕ್ತಿಯ ರಿಯಲ್ ವೀಡಿಯೋ ಬಯಲಾಗಿದೆ. ನೋಡಿ ಇದು ರಜಿನಿಕಾಂತೇನಾ? ಅಥವಾ ಬೇರೆ ಯಾರಾದ್ರೂನಾ..? ನೀವೆ ಗುರುತು ಹಿಡೀತಿರಾ. ಡೀಸೆಂಟ್ ಸ್ಟೈಲಿಷ್ ತಲೈವಾ ಎಲ್ಲಿ..? 

ಪಕ್ಕಾ ಹಳ್ಳೀ ಹೈದನಂತೆ ತಮಾಷೆ ಮಾಡ್ತಾ ನಿಂತಿರೋ ಈ ವ್ಯಕ್ತಿ ಎಲ್ಲಿ,..?  ವೀಡಿಯೋ ನೋಡಿದ ಒಂದು ಕ್ಷಣ  ಜನ ಕನ್ಫ್ಯೂಸ್ ಆದೋದಂತೂ ಗ್ಯಾರೆಂಟಿ. ಆದ್ರೆ ಈಗ ಆ ವೀಡಿಯೋ ಅಸಲಿ ಸತ್ಯ ಬಹಿರಂಗವಾಗಿದೆ. ಸಾಕಷ್ಟು ಗ್ಯಾಪ್‌ನ ನಂತರ ಜೈಲರ್ ಮೂಲಕ ಬಿಗ್‌ ಸ್ಕ್ರೀನ್‌ ಮೇಲೆ ಮೋಡಿ ಮಾಡಿದ್ದ ತಲೈವಾ ರಜನಿ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಸಲಿಗೆ ಆ ಫೋಟೋ ರಜನಿಕಾಂತ್‌ ಅವರದ್ದು ಅಲ್ಲ, ಅವರನ್ನು ಹೋಲುವ ವ್ಯಕ್ತಿಯೊಬ್ಬನದ್ದು. ಅನ್ನೋದು ಈಗ  ಬಯಲಾಗಿದೆ. ಅದು ಫೇಕ್ ವೀಡಿಯೋ ಆಗಿದ್ದು ರಜಿನಿಕಾಂತ್ರಂತೆ ಕಾಣೋ ಯಾರೋ ಸಾಮಾನ್ಯ ವ್ಯಕ್ತಿಯೊಬ್ಬರದ್ದಾಗಿದೆ.