Asianet Suvarna News Asianet Suvarna News

ಪ್ರಶಾಂತ್ ನೀಲ್ 'ಸಲಾರ್'ನಿಂದ ಸಿಕ್ತಿದೆ ಬಿಗ್ ಸರ್ಪ್ರೈಸ್

ಪ್ರಭಾಸ್ ನಟನೆಯ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪಪ್ಪಟ್ಟಾಗಿದೆ. ಟೀಸರ್ ರಿಲೀಸ್ ಸಮಯ ಭಾರಿ ಕುತೂಹಲ ಮೂಡಿಸಿದೆ. 

First Published Jul 5, 2023, 2:39 PM IST | Last Updated Jul 5, 2023, 2:39 PM IST

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಸಲಾರ್ ಸಿನಿಮಾ ಅದ್ಯಾವಾಗ ಬರುತ್ತೆ ಅನ್ನೋದಕ್ಕೆ ಉತ್ತರ ಸಿಗ್ತಾ ಇದೆ. ಆದ್ರೆ ಸಲಾರ್ ಹೇಗಿರುತ್ತೆ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಬರೀ ಪೋಸ್ಟರ್ ನೋಡಿಯೇ ಸಲಾರ್ ಹಾಗಿದೆ ಹೀಗಿದೆ ಅಂತ ಉತ್ತರ ಹುಡುಕಲಾಗ್ತುದೆ. ಫೈನಲಿ ಒನ್ ಫೈನ್ ಡೇ ಅಂತ ಜೂನ್ 6ಕ್ಕೆ ಬೆಳಗ್ಗೆ 5 ಗಂಟೆ 12 ನಿಮಿಷಕ್ಕೆ ಸಲಾರ್ ಟೀಸರ್ ರಿಲೀಸ್ ಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟುಹಾಕ್ತಿರೋದು ಸಲಾರ್ ಟೀಸರ್ ರಿಲೀಸ್ ಆಗೋ ಟೈಮಿಂಗ್ಸ್. ಬೆಳ್ಳಂ ಬೆಳಗ್ಗೆ ಸಲಾರ್ ಟೀಸರ್ ರಿಲೀಸ್ ಆಗ್ತಿರೋದಕ್ಕೆ ಗಾಂಧಿನಗರದಲ್ಲಿ ದಂತಕತೆಯೊಂದು ಹುಟ್ಟಿಕೊಂಡಿದೆ. ಸಲಾರ್ ಸಿನಿ ಅಭಿಮಾನಿಗಳು ಕಾಯ್ತಾ ಇರೋ ಸಿನಿಮಾ. ಅದಕ್ಕೆ ಹತ್ತಾರು ಕಾರಣಗಳಿವೆ. ಯಾಕಂದ್ರೆ ಕೆಜಿಎಫ್ನಲ್ಲಿ ನರಾಚಿ ಸಾಮ್ರಾಜ್ಯ ಕಟ್ಟಿದ್ದ ಪ್ರಶಾಂತ್ ನೀಲ್ ಅವರ ಮತ್ತೊಂದು ಕಲ್ಪನೆ. ಈ ಕಲ್ಪನೆಯ ಕೇಂದ್ರ ಬಿಂದು ಪ್ರಭಾಸ್. ಅದಕ್ಕೆ ಒತ್ತಾಸೆಯಾಗಿ ನಿಂತಿರೋದು ಹೊಂಬಾಳೆ ಫಿಲ್ಮ್ಸ್. 

Video Top Stories