'ನಾವು ಮದುವೆಯಾಗೋಣ' ಸಿಂಬು ಮನೆ ಮುಂದೆ ನಟಿಯ ಹೈಡ್ರಾಮ!
ಕಾಲಿವುಡ್ ನ ಸ್ಟಾರ್ ನಟ ಸಿಂಬು (Simbu) ಇಂದಿಗೂ ಕೂಡ ಮದುವೆ ಆಗದೇ ಸಿಂಗಲ್ ಆಗಿಯೇ ಉಳಿದಿದ್ದಾರೆ. ಇತ್ತೀಚಿಗಷ್ಟೇ ನಿಧಿ ಅಗರ್ ವಾಲ್ ಜೊತೆ ಸಿಂಬು ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋದು ಸುದ್ದಿಯಾಗಿತ್ತು.
ಕಾಲಿವುಡ್ ನ ಸ್ಟಾರ್ ನಟ ಸಿಂಬು (Simbu) ಇಂದಿಗೂ ಕೂಡ ಮದುವೆ ಆಗದೇ ಸಿಂಗಲ್ ಆಗಿಯೇ ಉಳಿದಿದ್ದಾರೆ. ಇತ್ತೀಚಿಗಷ್ಟೇ ನಿಧಿ ಅಗರ್ ವಾಲ್ ಜೊತೆ ಸಿಂಬು ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋದು ಸುದ್ದಿಯಾಗಿತ್ತು. ಆದ್ರೆ ಈಗ ಕಿರುತೆರೆಯ ನಟಿಯೊಬ್ಬರು ಸಿಂಬು ನನಗೆ ಬೇಕೇ ಬೇಕು ಅಂತ ಅವ್ರ ಮನೆ ಮುಂದೆ ಪ್ರತಿಭಟನೆ ಮಾಡುವ ಮೂಲಕ ಸಿಂಬು ಹಿಂದೆ ಬಿದ್ದಿದ್ದಾರೆ.
ಗರ್ಲ್ ಫ್ರೆಂಡ್ ಬಗ್ಗೆ ಶಿವಣ್ಣನ ಜೊತೆ ವಿಕ್ರಮ್ ರವಿಚಂದ್ರನ್ ಹೇಳಿದ್ದೇನು.?
ಕಿರುತೆರೆಯ ನಟಿ ನಿರೂಪಕಿ ಶ್ರೀನಿಧಿ ರೆಡ್ಡಿ ಇತ್ತೀಚಿಗಷ್ಟೇ ಸಿಂಬು ಮನೆ ಮುಂದೆ ಹೋಗಿ ನನಗೆ ಸಿಂಬು ಬೇಕು ಎಂದು ಪ್ರತಿಭಟನೆ ಮಾಡುತ್ತೇನೆ ಎಂದು ರಂಪಾಟ ಮಾಡಿದ್ದಾರೆ. ಇದನ್ನ ತಿಳಿದ ಸಿಂಬು ಮನೆಯವ್ರು ಅವರನ್ನ ಸಮಾಧಾನ ಮಾಡಿ ಬುದ್ದಿವಾದ ಹೇಳಿ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿಯೂ ಪೋಸ್ಟ್ ಹಾಕಿಕೊಂಡಿದ್ದಾರೆ ನಾನು ಸಿಂಗಲ್ ನೀವು ಸಿಂಗಲ್ ಮದುವೆ ಮಾಡಿಕೊಳ್ಳೋಣ ಎಂದಿದ್ದಾರೆ ಶ್ರೀನಿಧಿ. ಆದ್ರೆ ಶ್ರೀನಿಧಿಯ ಈ ಹುಚ್ಚಾಟಕ್ಕೆ ಸಿಂಬು ಕ್ಯಾರೇ ಅಂದಿಲ್ಲ. ಆದ್ರೆ ಈ ಸುದ್ದಿ ಮಾತ್ರ ಎಲ್ಲೆಡೆ ವೈರಲ್ ಆಗ್ತಿದೆ.