Asianet Suvarna News Asianet Suvarna News

ಕರಣ್ ಜೋಹರ್ ಬರ್ತಡೇಯಲ್ಲಿ ಸೌತ್ ಸ್ಟಾರ್ಸ್ ಕ್ಯಾಟ್ ವಾಕ್: ಬ್ಲಾಕ್ ಡ್ರೆಸ್‌ನಲ್ಲಿ ರಂಗು ಹೆಚ್ಚಿಸಿದ ರಶ್ಮಿಕಾ

ಬಾಲಿವುಡ್‌ನ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನ ಇತ್ತೀಚಿಗಷ್ಟೇ ಆಚರಿಸಿಕೊಂಡರು. ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಯ್ತು.

ಬಾಲಿವುಡ್‌ನ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬವನ್ನ ಇತ್ತೀಚಿಗಷ್ಟೇ ಆಚರಿಸಿಕೊಂಡರು. ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಯ್ತು. ಹಾಫ್ ಸೆಂಚುರಿ ಬಾರಿಸಿರೋ ಕರಣ್ ಬರ್ತಡೇಯನ್ನ ಅದ್ದೂರಿಯಾಗಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಆಚರಿಸಲಾಯ್ತು. ಒಂದು ಕಡೆ ಕರಣ್ ಹುಟ್ಟುಹಬ್ಬ ಅನ್ನೋ ಖುಷಿಯಾಗಿದ್ರೆ, ಮತ್ತೊಂದೆಡೆ ಬರ್ತಡೇಗೆ ಬಂದು ಬಾಲಿವುಡ್ ಮತ್ತು ಸೌತ್ ಸಿನಿರಂಗದ ತಾರೆಯರೆಲ್ಲ ಜೊತೆಯಾಗಿದ್ದೆ ಮತ್ತೊಂದು ವಿಶೇಷ.

ಪದೇ ಪದೇ ಕನ್ನಡ ಚಿತ್ರರಂಗವನ್ನು ಕೆಣಕುತ್ತಿರೋ ಡರ್ಟಿ ಡೈರೆಕ್ಟರ್ಸ್

ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ಸಲ್ಮಾನ್ ಖಾನ್,ಕರೀನಾ ಮತ್ತು ಸೈಫ್ ಆಲಿಖಾನ್, ವಿಕ್ಕಿ ಮತ್ತು ಕತ್ರಿನಾ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಟೈಗರ್ ಶ್ರಾಫ್, ಸಿದ್ಧಾರ್ಥ್ ಮತ್ತು ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಕಿಯಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್, ರಣ್‌ಬೀರ್ ಕಪೂರ್ ಮತ್ತು ನೀತು ಕಪೂರ್ ಹೀಗೆ ಸಾಕಷ್ಟು ಸ್ಟಾರ್ಸ್ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies