ನಟಿ ತಮನ್ನಾ ಹೊಸ ಫೋಟೋಶೂಟ್: ಮಿಲ್ಕಿ ಬ್ಯೂಟಿ ನ್ಯೂ ಲುಕ್​ಗೆ ಅಬ್ಬಬ್ಬಾ ಎನ್ನುತ್ತಿರೋ ಫ್ಯಾನ್ಸ್!

ಟಾಲಿವುಡ್​ ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ವರ್ಷ ಕಾವಾಲಯ್ಯ ಕಾವಾಲಯ್ಯ ಅಂತ ಕುಣಿದು ಎಲ್ಲರನ್ನ ತನ್ನ ಕನವರಿಕೆಯಲ್ಲಿ ಕೆಡವಿದ್ರು. ಈ ವರ್ಷ ಸ್ತ್ರೀ ಚಿತ್ರದಲ್ಲಿ ಸೊಂಟ ಬಳುಕಿಸಿ ತನ್ನ ಸಪೂರ ಸೌಂಧರ್ಯದಿಂದ ಪಡ್ಡೆ ಹೈಕ್ಳ ಕನಸಲ್ಲಿ ಕಾಡುತ್ತಿದ್ದಾರೆ. 

First Published Aug 23, 2024, 5:03 PM IST | Last Updated Aug 23, 2024, 5:04 PM IST

ಟಾಲಿವುಡ್​ ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ವರ್ಷ ಕಾವಾಲಯ್ಯ ಕಾವಾಲಯ್ಯ ಅಂತ ಕುಣಿದು ಎಲ್ಲರನ್ನ ತನ್ನ ಕನವರಿಕೆಯಲ್ಲಿ ಕೆಡವಿದ್ರು. ಈ ವರ್ಷ ಸ್ತ್ರೀ ಚಿತ್ರದಲ್ಲಿ ಸೊಂಟ ಬಳುಕಿಸಿ ತನ್ನ ಸಪೂರ ಸೌಂಧರ್ಯದಿಂದ ಪಡ್ಡೆ ಹೈಕ್ಳ ಕನಸಲ್ಲಿ ಕಾಡುತ್ತಿದ್ದಾರೆ. ಆದ್ರೆ ತಮನ್ನಾ ಮಾತ್ರ ಕೃಷ್ಣನನ್ನ ಕನವರಿಸುತ್ತಿದ್ದಾರೆ. ಹಾಗಾದ್ರೆ ಏನಿದು ತಮನ್ನಾ ಕೃಷ್ಣ ಕಥೆ.? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ತಮನ್ನಾ ಭಾಟಿಯಾ. ಭಾರತೀಯ ಚಿತ್ರ ಜಗತ್ತಿನ ದಂತದ ಗೊಂಬೆ. ಈಕೆಯ ವಯ್ಯಾರಕ್ಕೆ, ಕಣ್ಣೋಟಕ್ಕೆ, ಬಳುಕೋ ಬಳ್ಳಿಯಂತಿರೋ ಆ ದೇಹ ಸಿರಿಗೆ ಮರುಳಾಗದವರು ಯಾರಿದ್ದಾರೆ ಹೇಳಿ. ದಶಕದಿಂದಲೂ ಚಿತ್ರರಂಗವನ್ನಾಳುತ್ತಿರೋ ತಮನ್ನಾ ಸದ್ಯ ಐಟಂ ಡಾನ್ಸ್​ ಲೋಕದ ಮಹಾರಾಣಿ ಆಗಿದ್ದಾರೆ. ಕಳೆದ ವರ್ಷದ ಕಾವಲಯ್ಯನ ಗುಂಗು ಇನ್ನೂ ಇಳಿದಲ್ಲ. ಆದಾಗ್ಲೆ ಸ್ತ್ರೀ ಸಿನಿಮಾದಲ್ಲಿ ಆಜ್ ಕೀ ರಾತ್ ಅಂತ ಕುಣಿದು ಕುಪ್ಪಳಿಸಿದ್ರು ತಮನ್ನಾ. 

ಪಡ್ಡೆ ಹೈಕ್ಳು ತಮನ್ನಾ ನಶೆಯಿಂದ ಹೊರ ಬಂದಿಲ್ಲ. ಅದಾಗ್ಲೆ ರಾಧೆ ಅವತಾರ ತಾಳಿ ಹುಚ್ಚು ಹಿಡಿಸದ್ದಾರೆ ತಮನ್ನಾ. ಭಾರತದ ಪ್ರೇಮ ಚರಿತ್ರೆಯಲ್ಲಿ ರಾಧೆ ಕೃಷ್ಣನ ಪ್ರೇಮ ಮಹತ್ತರವಾದದ್ದು. ಅಂತಹ ಪ್ರೇಮ ಕಥೆ ಹೇಳುತ್ತಿದ್ದಾರೆ ತಮನ್ನಾ. ಕೃಷ್ಣನನ್ನ ಕನವರಿಸುತ್ತಿರೊ ರಾಧೆಯಾಗೆ ತಮನ್ನಾ ತನ್ನನ್ನ ತಾನು ಮೈ ಮರೆತಿದ್ದಾರೆ. ಕೊಳದಲ್ಲಿ ಕಮಲದ ಜೊತೆ ಆಟ ಆಡುತ್ತಿದ್ರೆ ಈ ವಯ್ಯಾರದ ಗೊಂಬೆ ಮೇಲೆ ಎಗ್ಗಿಲ್ಲದೆ ಲವ್ ಆಗೋದು ಪಕ್ಕಾ. ಕೃಷ್ಣನ ಧ್ಯಾನಿಸುತ್ತಾ ಕೃಷ್ಣನ ಕೊಳಲಿನ ನಾದಕ್ಕೆ ಮನಸೊತರೋ ಈ ರಾಧೆಯ ನೋಡುತ್ತಿದ್ರೆ ನೀವು ಮೈ ಮರೆಯುತ್ತಿರಾ. ಅಂದಹಾಗೆ ತಮನ್ನಾರ ಈ ರಾಧೆ ಅವತಾರ ಯಾಕೆ ಗೊತ್ತಾ..? ತಮನ್ನಾ ತನ್ನ ಬ್ರ್ಯಾಂಡ್ ಪ್ರಮೋಷನ್ ಭಾಗವಾಗಿ ಈ ಫೋಟೋ ಶೂಟ್ ಮಾಡಿಸಿದ್ದಾರೆ. ಎನಿ ವೇ ತಮನ್ನಾ ಮಾತ್ರ ದಿನಾ ದಿನ ತನ್ನ ಸೌಂದರ್ಯದಿಂದ ಅಂತಪುರದ ರಾಣಿಯಾಗಿ ಗಂಡ್ ಹೈಕ್ಳ ಎದೆಗೆ ಡೈರೆಕ್ಟರ್ ಆಗಿ ಇಳಿಯುತ್ತಿರೋದು ಮಾತ್ರ ಸುಳ್ಳಲ್ಲ.

Read More...