Asianet Suvarna News Asianet Suvarna News

2ನೇ ಮದ್ವೆಯಾಗಿದ್ದೇ ಆಗಿದ್ದು, ಮೊದಲ ಪತ್ನಿಯ ಅನ್‌ಫಾಲೋ ಮಾಡಿದ ಅರ್ಬಾಜ್ ಖಾನ್

ಅರ್ಬಾಜ್ ಖಾನ್ ತಮ್ಮ ಮಾಜಿ ಪತ್ನಿ ಮಲೈಕಾ ಅರೋರಾ ಅವರನ್ನು ಇನ್ಸ್ಟಾಗ್ರಾಮ್​ನಲ್ಲಿ ಅನ್​​ಫಾಲೋ ಮಾಡಿದ್ದಾರೆ. ಅರ್ಬಾಜ್ ಇತ್ತೀಚೆಗೆ ಡಿಸೆಂಬರ್ 24 ರಂದು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ಮದುವೆಯಾದ್ರು.

ಅರ್ಬಾಜ್ ಖಾನ್ ತಮ್ಮ ಮಾಜಿ ಪತ್ನಿ ಮಲೈಕಾ ಅರೋರಾ ಅವರನ್ನು ಇನ್ಸ್ಟಾಗ್ರಾಮ್​ನಲ್ಲಿ ಅನ್​​ಫಾಲೋ ಮಾಡಿದ್ದಾರೆ. ಅರ್ಬಾಜ್ ಇತ್ತೀಚೆಗೆ ಡಿಸೆಂಬರ್ 24 ರಂದು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ಮದುವೆಯಾದ್ರು. ಅರ್ಬಾಜ್ ತನ್ನ Instagram ಖಾತೆಯನ್ನು 127 ಮಂದಿಯನ್ನು ಫಾಲೋ ಮಾಡ್ತಿದ್ದಾರೆ. ಈ ಪಟ್ಟಿಯಲ್ಲಿ ಅವರ ಸಹೋದರರಾದ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ಮತ್ತು ಅವರ ಮಗ ಅರ್ಹಾನ್ ಖಾನ್ ಸೇರಿದ್ದಾರೆ. ಈ ಪಟ್ಟಿಯಲ್ಲಿ ಮಲೈಕಾ ಕೂಡ ಇದ್ದರು. ಆದರೆ ಇದೀಗ ಮಲೈಕಾ ಈ ಪಟ್ಟಿಯಿಂದ ಹೊರಗೆ ಹೋಗಿದ್ದಾರೆ. ಅಚ್ಚರಿ ಎಂದ್ರೆ ಮಲೈಕಾ ಅರೋರ ಈಗಲೂ ಅರ್ಬಾಜ್ ಅವರನ್ನು ಫಾಲೋ ಮಾಡ್ತಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 1998 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. 2017ರಲ್ಲಿ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ದೂರವಾದ್ರೂ ಇಬ್ಬರೂ ಮಗ ಅರ್ಹಾನ್ ಖಾನ್ ಗಾಗಿ ಆಗಾಗ ಭೇಟಿಯಾಗ್ತಿದ್ರು. ಸುಮಾರು 7 ವರ್ಷಗಳ ವಿಚ್ಛೇದನದ ನಂತರ, ಅರ್ಬಾಜ್ ಎರಡನೇ ಬಾರಿಗೆ ವಿವಾಹವಾದರು.

Video Top Stories