Asianet Suvarna News Asianet Suvarna News

Kangana Ranaut: ಬಾಲಿವುಡ್ ಸ್ಟಾರ್ ಜೋಡಿಗೆ ಮನೆಗೆ ನುಗ್ಗಿ ಹೊಡೀತೀನಿ ಎಂದ ಕಂಗನಾ

ಬಾಲಿವುಡ್‌ ನಟಿ ಕಂಗನಾ ರಣಾವತ್, ಬಾಲಿವುಡ್​ನ ಸ್ಟಾರ್ ದಂಪತಿ ವಿರುದ್ಧ ಕಿಡಿ ಕಾರಿದರು. ತಮ್ಮ ಮೇಲೆ ಸ್ಪೈ ಮಾಡ್ತಿದ್ದಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

First Published Feb 11, 2023, 5:48 PM IST | Last Updated Feb 11, 2023, 5:48 PM IST

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್ ಸೆಲೆಬ್ರಿಟಿ ಜೋಡಿಯೊಂದು, ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಕಂಗನಾ ಆರೋಪ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಸೆಲೆಬ್ರಿಟಿ ದಂಪತಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಮನೆಗೆ ನುಗ್ಗಿ ನಿಮಗೆ ಹೊಡೆಯುತ್ತೇನೆ ಎಂದು ಖಾರವಾಗಿ ಬರೆದುಕೊಂಡಿರುವ ಅವರು, ಬಾಲಿವುಡ್​ನ ಯಾವುದೇ ಸೆಲೆಬ್ರಿಟಿ ದಂಪತಿ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಭಾರೀ  ಚರ್ಚೆ ಶುರುವಾಗಿದೆ.

Video Top Stories