Rashmika Mandanna: ಬ್ಯಾನ್ ವಿಚಾರ ಮೌನ ಮುರಿದ ರಶ್ಮಿಕಾ: ಶ್ರೀವಲ್ಲಿ ಕೊಟ್ಟ ಉತ್ತರ ಏನು?
ಕನ್ನಡದ ಮೇಲೆ ರಶ್ಮಿಕಾಗೆ ಗೌರವ ಇಲ್ಲ, ಅವರನ್ನು ಬ್ಯಾನ್ ಮಾಡಬೇಕು ಎತ್ತುತ್ತಿದ್ದವರಿಗೆ ಶ್ರೀವಲ್ಲಿ ಇದೀಗ ಉತ್ತರ ಕೊಟ್ಟು ಎಲ್ಲದಕ್ಕೂ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರನ್ನು ಸ್ಯಾಂಡಲ್ ವುಡ್'ನಲ್ಲಿ ಬ್ಯಾನ್ ಮಾಡ್ಬೇಕು ಅನ್ನುವ ಚರ್ಚೆ ಎದ್ದಿತ್ತು. ಅದಕ್ಕೆ ಸರಿಯಾಗಿ ಟಾಲಿವುಡ್'ನಲ್ಲೂ ಶ್ರೀವಲ್ಲಿಯನ್ನು ಬ್ಯಾನ್ ಮಾಡಬೇಕು ಅಂತ ತೆಲುಗು ಚಿತ್ರರಂಗದವರೇ ಧ್ವನಿ ಎತ್ತಿದ್ರು. ಆದ್ರೆ ಈಗ ಈ ಬ್ಯಾನ್ ಸಮರಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ. ಬ್ಯಾನ್ ವಿಚಾರ ಸೋಶಿಯಲ್ ಮೀಡಿಯಾ ಚರ್ಚೆ ಅಷ್ಟೆ. ಚಿತ್ರರಂಗದಿಂದ ಯಾರು ಹೇಳಿಲ್ಲ. ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ. ಕನ್ನಡ ಸಿನಿಮಾಗಳ ಮೇಲೆ ಯಾವಾಗಲೂ ನನಗೆ ಪ್ರೀತಿ ಇದ್ದೇ ಇದೆ ಎಂದಿದ್ದಾರೆ.
ಮದುವೆ ಬಳಿಕ ಅಡುಗೆ ಕಲಿಯುತ್ತಿರುವ ಹನ್ಸಿಕಾ; ಪತಿಗೆ ಸ್ಪೆಷಲ್ ಡಿಶ್ ಮಾಡಿ ಬಡಿಸಿದ 'ಬಿಂದಾಸ್' ನಟಿ