Asianet Suvarna News Asianet Suvarna News

RRR Postponed: ಸಂಕ್ರಾಂತಿಗೆ ತೆರೆ ಮೇಲೆ ಬರಲಿವೆ ತೆಲುಗಿನ 8 ಚಿತ್ರಗಳು!

ರಾಜಮೌಳಿಯ ಕನಸು 'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದ್ದೇ ಹಾಕಿದ್ದು, ಟಾಲಿವುಡ್‌ನಲ್ಲಿ ಸಿನಿಮಾ ಜಾತ್ರೆ ಶುರುವಾಗಿದೆ. 'ಆರ್‌ಆರ್‌ಆರ್‌' ಸಿನಿಮಾ ಜನವರಿ 7ಕ್ಕೆ ರಿಲೀಸ್ ಆಗಲ್ಲ ಅನ್ನೋದು ಗೊತ್ತಾಗ್ತಿದ್ದ ಹಾಗೆ ತೆಲುಗು ಸಿನಿಮಾಗಳ ಸಾಲು ಸಾಲಾಗಿ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿವೆ. ಅದರಲ್ಲೂ ಸಂಕ್ರಾಂತಿ ಹಬ್ಬದ ದಿನ ತೆಲುಗು ನಾಡಿನಲ್ಲಿ ಬರೋಬ್ಬರಿ 8 ಸಿನಿಮಾಗಳು ತೆರೆ ಕಾಣುತ್ತಿದೆ. 

ರಾಜಮೌಳಿಯ (Rajamouli) ಕನಸು 'ಆರ್‌ಆರ್‌ಆರ್‌' (RRR) ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದ್ದೇ ಹಾಕಿದ್ದು, ಟಾಲಿವುಡ್‌ನಲ್ಲಿ (Tollywood) ಸಿನಿಮಾ ಜಾತ್ರೆ ಶುರುವಾಗಿದೆ. 'ಆರ್‌ಆರ್‌ಆರ್‌' ಸಿನಿಮಾ ಜನವರಿ 7ಕ್ಕೆ ರಿಲೀಸ್ ಆಗಲ್ಲ ಅನ್ನೋದು ಗೊತ್ತಾಗ್ತಿದ್ದ ಹಾಗೆ ತೆಲುಗು ಸಿನಿಮಾಗಳ ಸಾಲು ಸಾಲಾಗಿ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿವೆ. ಅದರಲ್ಲೂ ಸಂಕ್ರಾಂತಿ ಹಬ್ಬದ ದಿನ ತೆಲುಗು ನಾಡಿನಲ್ಲಿ ಬರೋಬ್ಬರಿ 8 ಸಿನಿಮಾಗಳು ತೆರೆ ಕಾಣುತ್ತಿದೆ. 

Acharya Trailer: ತಂದೆ-ಮಗನ ಜುಗಲ್ಬಂದಿಗೆ ಮೆಗಾ ಫ್ಯಾನ್ಸ್ ಫಿದಾ!

ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ನಟನೆಯ 'ಸೂಪರ್ ಮಚ್ಚಿ' ಸಿನಿಮಾದ ಜೊತೆಗೆ ರಾಣಾ ನಟನೆಯ '1945' ಸಿನಿಮಾ, ಡೈಲಾಗ್ ಕಿಂಗ್ ಸಾಯಿಕುಮಾರ್ ಪುತ್ರ ಆದಿ ಸಾಯಿಕುಮಾರ್ 'ಅತಿಥಿ ದೇವೋಭವ' ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಈ ಸಿನಿಮಾಗಳಲ್ಲದೇ ನಟಿ ನೇಹಾ ಶೆಟ್ಟಿಯ 'DJ Tillu' ಹಾಗು ರೌಡಿ ಬಾಯ್ಸ್ ಹಾಗೂ ಪ್ರಭಾಸ್ (Prabhas) ನಟನೆಯ ರಾಧೆ ಶ್ಯಾಮ್ (Radhe Shyam) ಕೂಡ ಅಂದೇ ಬಿಡುಗಡೆ ಆಗಲಿದೆ. ರಾಧೆ ಶ್ಯಾಮ್ ಬಿಡುಗಡೆ ವಿಷಯದಲ್ಲಿ ಗೊಂದಲ ಇದ್ದರೂ ಚಿತ್ರತಂಡ ಇದುವರೆಗೂ ಸಿನಿಮಾ ರಿಲೀಸ್ ಮಾಡಲ್ಲ ಅಂತ ಎಲ್ಲಿಯೂ ಹೇಳಿಕೊಂಡಿಲ್ಲ. ಹೀಗಾಗಿ ಟಾಲಿವುಡ್‌ನಲ್ಲಿ ಸಂಕ್ರಾಂತಿಗೆ ಒಟ್ಟು ಎಂಟು ಸಿನಿಮಾಗಳು ತೆರೆಮೇಲೆ ಬರಲಿವೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories