ಇದು ಬರೀ ಮಾತ್ರೆಯಲ್ಲಣ್ಣೋ ಪ್ಲಾಸ್ಟಿಕ್ ಮಾತ್ರೆ! ನಂಬದಿರಿ, ನಂಬಿ ತಿನ್ನದಿರಿ!

ಚಿತ್ರದುರ್ಗ (ಜ. 13): ಪ್ಲಾಸ್ಟಿಕ್ ಅಕ್ಕಿ ಆಯ್ತು, ಪ್ಲಾಸ್ಟಿಕ್ ಮೊಟ್ಟೆ ಆಯ್ತು, ಈಗ ಪ್ಲಾಸ್ಟಿಕ್ ಮಾತ್ರೆ ಸರದಿ! ಚಿತ್ರದುರ್ಗದಲ್ಲಿ ಪ್ಲಾಸ್ಟಿಕ್ ಮಾತ್ರೆ ಬಂದಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಮಾತ್ರೆಯನ್ನು ನೀರಿಗೆ ಹಾಕಿದ್ರೆ ಮೂರ್ನಾಲ್ಕು ಗಂಟೆಯೊಳಗೆ ಕರಗುತ್ತದೆ. ಆದರೆ ಈ ಮಾತ್ರೆಯನ್ನು ಟೆಸ್ಟ್‌ಗಾಗಿ ಒಂದು ದಿನ ನೀರಿಗೆ ಹಾಕಿಟ್ಟರೂ ಕರಗದೇ ಹಾಗೆಯೇ ಇದೆ. ಹಾಗಾಗಿ ಇದನ್ನು ಸಾರ್ವಜನಿಕರಾರೂ ನಂಬಿ ಬಳಸಬಾರದು ಎಂದು ವಕೀಲರೊಬ್ಬರು ವಿನಂತಿಸಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ. 

First Published Jan 13, 2020, 4:34 PM IST | Last Updated Jan 13, 2020, 4:34 PM IST

ಚಿತ್ರದುರ್ಗ (ಜ. 13): ಪ್ಲಾಸ್ಟಿಕ್ ಅಕ್ಕಿ ಆಯ್ತು, ಪ್ಲಾಸ್ಟಿಕ್ ಮೊಟ್ಟೆ ಆಯ್ತು, ಈಗ ಪ್ಲಾಸ್ಟಿಕ್ ಮಾತ್ರೆ ಸರದಿ! ಚಿತ್ರದುರ್ಗದಲ್ಲಿ ಪ್ಲಾಸ್ಟಿಕ್ ಮಾತ್ರೆ ಬಂದಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. 

ಮಧುಮೇಹ ಮಾತ್ರೆಯಲ್ಲಿ ಪ್ಲಾಸ್ಟಿಕ್ ಆರೋಪ : ನೀರಲ್ಲೂ ಕರಗುತ್ತಿಲ್ಲ..?

ಸಾಮಾನ್ಯವಾಗಿ ಮಾತ್ರೆಯನ್ನು ನೀರಿಗೆ ಹಾಕಿದ್ರೆ ಮೂರ್ನಾಲ್ಕು ಗಂಟೆಯೊಳಗೆ ಕರಗುತ್ತದೆ. ಆದರೆ ಈ ಮಾತ್ರೆಯನ್ನು ಟೆಸ್ಟ್‌ಗಾಗಿ ಒಂದು ದಿನ ನೀರಿಗೆ ಹಾಕಿಟ್ಟರೂ ಕರಗದೇ ಹಾಗೆಯೇ ಇದೆ. ಹಾಗಾಗಿ ಇದನ್ನು ಸಾರ್ವಜನಿಕರಾರೂ ನಂಬಿ ಬಳಸಬಾರದು ಎಂದು ವಕೀಲರೊಬ್ಬರು ವಿನಂತಿಸಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ.