Asianet Suvarna News Asianet Suvarna News

ಅಯ್ಯೋ..ವಿಧಿಯೇ..!: SSLC ಪಾಸಾದ ಮಗಳಿಗೆ ಸ್ವೀಟ್ ತರಲು ಹೋದ ತಂದೆ ಸಾವು

SSLC ಪಾಸ್ ಆಗಿದ್ದ ಮಗಳಿಗೆ ಸ್ವೀಟ್​ ತರಲು ಹೋದ ತಂದೆ ಸಾವು..!

 SSLC ಪಾಸ್ ಆಗಿದ್ದ ಮಗಳಿಗೆ ಸ್ವೀಟ್​ ತರಲು ಹೋಗಿದ್ದ ತಂದೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ತುರುವನೂರು ಠಾಣೆ ವ್ಯಾಪ್ತಿಯ ಬೆಳಗಟ್ಟ ಬಳಿ ನಡೆದಿದೆ.  ಸಿದ್ದೇಶ್ (45) ಮೃತ ದುರ್ದೈವಿ. ಸಿದ್ದೇಶ್​ ಪುತ್ರಿ ಕಾವ್ಯ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ಹಿನ್ನೆಲೆ ಸಿದ್ದೇಶ್​ ಮಗಳಿಗಾಗಿ ಸ್ಟೀಟ್​ ತರಲು ಚಿತ್ರದುರ್ಗಕ್ಕೆ ತೆರಳಿದ್ರು. ಸ್ವೀಟ್​ ಕೊಂಡುಕೊಂಡು ಬೈಕ್​ನಲ್ಲಿ ಚಿತ್ರದುರ್ಗದಿಂದ ಕಡಬನಕಟ್ಟೆಗೆ ಹೋಗುವಾಗ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ ಸಿದ್ದೇಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.