Asianet Suvarna News Asianet Suvarna News

Karnataka Budget 2022 ತಮ್ಮ ಚೊಚ್ಚಲ ಬಜೆಟ್‌ ಬಗ್ಗೆ ಬೊಮ್ಮಾಯಿ ಹೇಳಿದ್ದು ಹೀಗೆ

* 2022-23ನೇ ಸಾಲಿ ಕರ್ನಾಟಕ ಬಜೆಟ್ ಮಂಡಿಸಿದ ಸಿಎಂ
* ಸಿಎಂ ಆದ 9 ತಿಂಗಳ ಬಳಿಕ ಚೊಚ್ಚಲ ಬಜೆಟ್​ ಮಂಡಿಸಿದ ಬೊಮ್ಮಾಯಿ
* ತಮ್ಮ ಚೊಚ್ಚಲ ಬಜೆಟ್‌ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು, (ಮಾ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavraj Bommai) ಅವರು  ಚೊಚ್ಚಲ ಬಜೆಟ್​ (Budget) ಮಂಡಿಸಿದ್ದಾರೆ. ಕೊರೋನಾ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2022-23ನೇ ಸಾಲಿನ ಬಜೆಟ್​ ಮಂಡಿಸಿದರು.

Karnataka Budget 2022 Live: ಮೇಕೆದಾಟು ಯೋಜನೆಗೆ ಅನುದಾನ, ಕಾಂಗ್ರೆಸ್‌ಗೆ ಬೊಮ್ಮಾಯಿ ಏಟು?

  ಬಳಿಕ ಸುದ್ದಿಗೋಷ್ಟಿಯಲ್ಲಿ ಬಜೆಟ್​ ಬಗ್ಗೆ ಮಾತನಾಡಿದ ಅವರು, ಈ ಬಾರಿ ಸೂಕ್ಷ್ಮ ಬಜೆಟ್​ ಮಂಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕತೆ ಬಹಳಷ್ಟು ಪೆಟ್ಟುಬಿದ್ದಿತ್ತು. ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿಂದ 2021 -22 ರಲ್ಲಿ ಕುಸಿತವಾಗಿತ್ತು. ಈಗ ಆರ್ಥಿಕತೆ ಸುಧಾರಿಸುತ್ತಿದೆ ಲೆಕ್ಕಚಾರ ಹಾಕೋದಕ್ಕೆ ಗೊತ್ತಾಗುತ್ತಿದೆ. 2.65.720 ಕೋಟಿ ಈ ಬಾರಿಯ ಬಜೆಟ್ ಗಾತ್ರವಾಗಿದೆ. ಕಳೆದ ಬಾರಿಗಿಂತ 19,513 ಕೋಟಿ ಹೆಚ್ಚಳವಾಗಿದೆ. ಕಳೆದ ಬಾರಿಗೆ ಕಂಪೇರ್ ಮಾಡಿದರೆ, ಕ್ಯಾಪಿಟಲ್ ಎಕ್ಸ್ಪೆಂಡೇಚರ್ ಸುಮಾರು 2700 ಕೋಟಿ ಹೆಚ್ಚಳವಾಗಿದೆ. ನಮಗೆ 67100 ಕೋಟಿ ಸಾಲ ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಆರ್ಥಿಕ ಸಂಪೂನ್ಮೂಲ ಹೆಚ್ಚಳ ಮಾಡುವುದರ ಮೂಲಕ, ಖರ್ಚುಗಳನ್ನ ಕಡಿಮೆಮಾಡುವುದರ ಮೂಲಕ ಸುಮಾರು 4 ಕೋಟಿ ಕಡಿಮೆ ಮಾಡಿದ್ದೇವೆ. ಇದು ನಮ್ಮ ಆರ್ಥಿಕತೆ ಬಗ್ಗೆ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

Video Top Stories