Asianet Suvarna News Asianet Suvarna News

ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

ಜೊತೆಗೆ ಮೇಳದಲ್ಲಿ ಮೈಸೂರು ಸಿಲ್ಕ್ ವಿಟೇಂಜ್ ಸ್ಪರ್ಧೆಯನ್ನು ಆಯೋಜಿಸಿದ್ದು, 50 ವರ್ಷಗಳ ಹಳೆಯ ಸೀರೆಗಳಿಗೆ ಬಹುಮಾನ ನೀಡಲಾಯಿತು. ಇನ್ನು ಮೇಳದಲ್ಲಿ  ಮೈಸೂರು ಸಿಲ್ಕ್ ಉತ್ಪಾದನೆ ಸ್ಥಳ, ಮಾರುವವರ ಮಾಹಿತಿ ಜೊತೆಗೆ ಸೀರೆಗಳ ಖರೀದಿ ಮೇಲೆ 10ರಿಂದ 25ರಷ್ಟು ರಿಯಾಯ್ತಿ ನೀಡಲಾಗಿದೆ. ಅ.15 ರಿಂದ ಅ. 21ರವರೆಗೆ ನಡೆಯಲಿರುವ ಮೇಳದಲ್ಲಿ 6,100 ರೂ.ನಿಂದ 2,60,000 ರೂ. ಮೌಲ್ಯದ ಸೀರೆಗಳು ಮಾರಾಟಕ್ಕಿವೆ.