ನಿಮ್ಗೆ ಮತ ಬೇಕು, ನಂಗೆ ಮಗ ಬೇಕು: ನಾಪತ್ತೆಯಾದ ಮಗನಿಗಾಗಿ ತಂದೆಯ ಕಣ್ಣೀರು!

ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ ಸುಮಾರು 3 ತಿಂಗಳುಗಳೇ ಕಳೆದಿವೆ. ಆದ್ರೆ ಬೋಟ್ ಕಥೆ ಏನ್ ಆಯ್ತು..? ಬೋಟ್ ನಲ್ಲಿ ಇದ್ದವರು ಏನ್ ಆದ್ರು..?  ಎನ್ನುವ ಈ ಬಗ್ಗೆ ಒಂದೇ ಒಂದು ಕುರುಹುಗಳು ಸಿಕ್ಕಿಲ್ಲ. ಇದ್ರಿಂದ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಸ್ಥರು ರಕ್ಷಣಾ ಸಚಿವರ ಮೊರೆ ಹೋಗಿದ್ದಾರೆ.

Father Urges Niramala Sitharaman To Find His Missing Son From Malpe

ಉಡುಪಿ, (ಮಾ.26): ತಮ್ಮ ಹೊಟ್ಟೆಪಾಡಿಗಾಗಿ ಮೀನುಗಾರಿಕೆಗೆ ಎಂದು ಮಲ್ಪೆಯ ಕಡಲ ತೀರದಿಂದ  ಅರಬ್ಬಿ ಸಮುದ್ರಕ್ಕಿಳಿದಿದ್ದ  8 ಜನರ ತಂಡ ನಾಪತ್ತೆಯಾಗಿ 3 ತಿಂಗಳುಗಳಾಗಿವೆ. ಆದ್ರೆ ಅವರ ಯಾವುದೇ ಸುಳಿವು ಪತ್ತೆಯಾಗದೇ ಕುಟುಂಬಸ್ಥರು ಆತಂಕದಲ್ಲಿದ್ದಾರೆ.

ಡಿಸೆಂಬರ್ 13ರಂದು ಸುಮಾರು ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಮೂಲಕ ಮೀನುಗಾರಿಕೆಗೆ ಹೋಗಿದ್ದರು. ಆದ್ರೆ ಬೋಟ್ ಸಂಪರ್ಕ ಸಿಗದೇ ಇದುವರೆಗೂ ಪತ್ತೆಯಾಗಿಲ್ಲ.

ಮಲ್ಪೆ: ಡಿ.13ರಂದು ಮೀನುಗಾರಿಕೆಗೆ ತೆರಳಿದ್ದವರು ನಾಪತ್ತೆ, ಆತಂಕದಲ್ಲಿ ಕುಟುಂಬಸ್ಥರು

ನಾಪತ್ತೆಯಾದವರು ಇವತ್ತು ಬರ್ತಾರೆ, ನಾಳೆ ಬರ್ತಾರೆ ಎಂದು ನಾಪತ್ತೆಯಾದ ಕುಟುಂಬಸ್ಥರು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ರಾಜ್ಯ ಸರ್ಕಾರವೂ ಸಹ ನಾಪತ್ತೆಯಾದವರನ್ನು ಹುಡುಕು ಪ್ರಯತ್ನ ಮಾಡಿದೆ. ಆದ್ರೆ ಪ್ರಯೋಜನವಾಗಿಲ್ಲ.

ರಕ್ಷಣಾ ಸಚಿವರ ಮೊರೆ 
ನಾಪತ್ತೆಯಾದವರ ಕುಟುಂಬಸ್ಥರಿಗೆ ಏನು ಮಾಡಬೇಕು ಎನ್ನುವುದು ದಿಕ್ಕುತೋಚುತ್ತಿಲ್ಲ. ಕೊನೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮೊರೆ ಹೋಗಿದ್ದು, ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾಪತ್ತೆಯಾದ ಮೀನುಗಾರರ ಪೈಕಿ ದಾಮೋದರ ಅವರ ತಂದೆ ಇಂದು (ಮಂಗಳವಾರ) ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ, ನನ್ನ ಮಗನನ್ನು ಒಮ್ಮೆ ಕಣ್ಣಲ್ಲಿ ನೋಡುವ ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದರು.

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಕಾಣೆಯಾದ ನಮ್ಮ ಮೀನುಗಾರರನ್ನು ಪತ್ತೆ ಮಾಡಲು ನೀವು ಏನೂ ಮಾಡಿಲ್ಲ ಎಂದು ಹೇಳುವುದಿಲ್ಲ. ಆದ್ರೆ,  ಏನು ಮಾಡುವುದಿದ್ದರೂ ನೀವೇ ಮಾಡಬೇಕು. ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಅದಷ್ಟು ಬೇಗ ಮೀನುಗಾರರನ್ನು ಹುಡುಕಿ ತನ್ನಿ. ಒಂದು ಬಾರಿ ನೋಡುತ್ತೆವೆ ಎಂದು ಕಣ್ಣೀರಿಟ್ಟರು.

ಇವರ ಕಣ್ಣೀರಿಗೆ ಸ್ಪಂದಿಸಿದ ಸಚಿವೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾನು ಈಗ ಏನೂ ಹೇಳುವಂತಿಲ್ಲ. ನೀವು ಯಾವಾಗ ಬೇಕಾದ್ರೂ ತನ್ನನ್ನು ಬೇಟಿಯಾಗುವುದಕ್ಕೆ ಬನ್ನಿ ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios