ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಪ್ರಾಂಶುಪಾಲ: ಕಾರಣ ನಿಗೂಢ
ಶಾಲಾ ಕಚೇರಿಯ ಕ್ಯಾಬಿನ್ ಒಳಗೆ ಆತ್ಮಹತ್ಯೆಗೆ ಶರಣಾದ ಪ್ರಾಂಶುಪಾಲ| ಉಡುಪಿಯ ಶಿರ್ವ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಆತ್ಮಹತ್ಯೆ
ಉಡುಪಿ, (ಅ.12): ಉಡುಪಿಯ ಶಿರ್ವ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮಹೇಶ್ ಡಿಸೋಜಾ(36) ಆತ್ಮಹತ್ಯೆ ಮಾಡಿಕೊಂಡ ಪ್ರಾಂಶುಪಾಲ. ಶಾಲಾ ಕಚೇರಿಯ ಕ್ಯಾಬಿನ್ ಒಳಗೆ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್ ನೋಟ್ ಪತ್ತೆ!
ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಉಡುಪಿ ಧರ್ಮಪ್ರಾಂತ್ಯ ಉದಯದ ಬಳಿಕ ಮಹೇಶ್ ಡಿಸೋಜಾ ಮೊದಲ ಧರ್ಮಗುರು ಆಗಿದ್ದರು. 2013ರಲ್ಲಿ ಇವರು ಗುರು ದೀಕ್ಷೆ ಪಡೆದಿದ್ದರು.
ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್ ನೋಟ್ ಪತ್ತೆ!
ಉಡುಪಿ ಕ್ರೈಸ್ತ ಸಮುದಾಯದ ಈ ಭಾಗದ ಧರ್ಮಗುರುವೂ ಆಗಿದ್ದ ಮಹೇಶ್, ಮೂಲತಃ ಮೂಡಬೆಳ್ಳೆಯ ನಿವಾಸಿಯಾಗಿದ್ದು ಡಾನ್ ಬಾಸ್ಕೊ ಶಾಲೆಯನ್ನು ಸಿಬಿಎಸ್ಸಿ ಪಠ್ಯಕ್ರಮಕ್ಕೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟಿದೆ.
ಅಪಾರ ಜನಮೆಚ್ಚುಗೆ ಗಳಿಸಿದ್ದ ಮಹೇಶ್ ಡಿಸೋಜಾ ಅವರ ಸಾವು ಸಾರ್ವಜನಿಕರಲ್ಲಿ ತೀವ್ರ ನೋವು ತಂದಿದೆ. ಘಟನೆ ಸಂಬಂಧ ಶಿರ್ವ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.