ಉಡುಪಿ(ಮಾ. 27) ಉಡುಪಿಯ ಪಲಿಮಾರು ಮಠಾಧೀಶರು ಉತ್ತರಾಧಿಕಾರಿ ಆಯ್ಕೆ ಮಾಡಿದ್ದಾರೆ. ಉಡುಪಿ ಸಮೀಪದ ಕೊಡವೂರು ಗ್ರಾಮದ ಶೈಲೇಶ್ ಉಪಾಧ್ಯಾಯ (20) ನೂತನ ಉತ್ತರಾಧಿಯಾಗಿ  ನೇಮಕವಾಗಿದ್ದು ಶ್ರೀಗಳು ಅಧಿಕೃತ ಘೋಷಣೆ ಮಾಡಿದ್ದಾರೆ.

ಮೇ 9ರಿಂದ 11ರವರೆಗೆ ಸನ್ಯಾಸ, ಉತ್ತರಾಧಿಕಾರ, ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ. ಪಲಿಮಾರು ಮಠದ ಯೋಗದೀಪಿಕ ವೇದಶಾಲೆಯ ವಿದ್ಯಾರ್ಥಿ ಶೈಲೇಶ್ ಉತ್ತರಾಧಿಕಾರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಉಡುಪಿಗೆ ಅಭಿನಂದನ್ ಕಳ್ಸಿ: ಶ್ರೀಗಳ ಮನವಿಗೆ ಸಚಿವೆ ಹೇಳಿದ್ದು ಪತ್ರ ಬರೆದು ತಿಳ್ಸಿ

ಬಾಲ್ಯದಿಂದಲೇ ಸನ್ಯಾಸದತ್ತ ಒಲವಿತ್ತು. ಕೃಷ್ಣನ ಮತ್ತು ರಾಮ ಪೂಜೆ ಮಾಡಬೇಕು ಎಂದು ಚಿಕ್ಕಂದಿನಲ್ಲಿಯೇ ಆಸೆ ಇತ್ತು, ನಾನಾಗಿಯೇ ಪಲಿಮಾರು ಶ್ರೀಗಳಲ್ಲಿ ಕೇಳಿದೆ. ಹೆತ್ತವರು ಮೊದಲು ಒಪ್ಪಲಿಲ್ಲ, ಈಗ ಜಾತಕದಲ್ಲಿಯೂ ನನಗೆ ಸನ್ಯಾಸ ಯೋಗ ವಿರುವುದರಿಂದ ಅವರು ಒಪ್ಪಿದ್ದಾರೆ ಎಂದು ಶೈಲೇಶ್ ಹೇಳಿದ್ದಾರೆ.

ಸುಮಾರು 9 ಶತಮಾನಗಳ ಹಿಂದೆ ದ್ವೈತ ಮತ ಪ್ರವರ್ತಕ ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಡುಪಿಯ 8 ಮಠಗಳಲ್ಲಿ ಮೊದಲನೇ ಮಠವೇ ಪಲಿಮಾರು ಮಠ.  ಋಷಿಕೇಶ ತೀರ್ಥರು ಮಧ್ವಾಚಾರ್ಯದ ಶಿಷ್ಯ, ಪಲಿಮಾರು ಮಠದ ಮೊದಲನೆ ಪೀಠಾಧೀಶರು. ಈಗಿನ ಶ್ರೀವಿದ್ಯಾಧೀಶ ತೀರ್ಥರು ಈ ಪರಂಪರೆಯ 30ನೇ ಪೀಠಾಧೀಶರಾಗಿದ್ದಾರೆ.