Asianet Suvarna News Asianet Suvarna News

ಮಕ್ಕಳ ಜತೆ ಮಗುವಾದ ಬೊಮ್ಮಾಯಿ ನೆಚ್ಚಿನ ನಟಿ ಯಾರು? ಹಾಡು ಹಾಡಿದ್ರು!

* ಜೀ ಕನ್ನಡದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ  ಬೊಮ್ಮಾಯಿ
* ಮಕ್ಕಳ ಪ್ರಶ್ನೆಗಳಿಗೆ ಸಿಎಂ ಸರಳ ಉತ್ತರ
* ಸಿಎಂ ಫೆವರೇಟ್ ನಾಯಕಿ ಯಾರು?
* ಬೊಮ್ಮಾಯಿ ಸದಾ ಗುನುಗುವ ಹಾಡು ಯಾವುದು?

Karnataka CM Basavaraj Bommai favorite actress madhubala Actor Dr Raj Kumar mah
Author
Bengaluru, First Published Aug 21, 2021, 8:18 PM IST
  • Facebook
  • Twitter
  • Whatsapp

ಬೆಂಗಳೂರು(ಆ. 21)  ಖಾಸಗಿ ವಾಹಿನಿ  ಜೀ ಕನ್ನಡದ ಹದಿನೈದು ವರ್ಷಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಮಕ್ಕಳ ಮಧ್ಯೆ ಬೊಮ್ಮಾಯಿ ಮಗುವಾಗಿದ್ದರು. ಸಿಎಂಗೆ ನೇರ ನೇರವಾಗಿ ಪ್ರಶ್ನೆ ಎಸೆದರು. ಮಕ್ಕಳು  ಕೇಳಿದ ಪ್ರಶ್ನೆ ಮತ್ತೆ ಅದಕ್ಕೆ ಬೊಮ್ಮಾಯಿ ನೀಡಿದ ಉತ್ತರ  ಒಂದೊಂದಾಗಿ ನಿಮ್ಮ ಮುಂದೆ ಇಡುತ್ತಿದ್ದೇವೆ.

ಅಂಕಲ್ ಅಂಕಲ್ ನಿಮಗೆ ಯಾವ ತಿಂಡಿ ಇಷ್ಟ? 
ನಮ್ಮ ತಾಯಿ ಬಿಸಿ ಬಿಸಿ ಜೋಳದ ರೊಟ್ಟಿ ಮಾಡೋದು ಇಷ್ಟ, ತಿನ್ನುತ್ತಾ ಇದ್ದರೆ ಲೆಕ್ಕವೇ ಇಲ್ಲ... ಈಗ ನಮ್ಮ ತಾಯಿ ಇಲ್ಲ ಯಾರೇ ರೊಟ್ಟಿ ಮಾಡಿದರೂ ನಮ್ಮ  ತಾಯಿ ಮಾಡಿದ್ದಾರೆ ಎಂದುಕೊಂಡು ತಿನ್ನುತ್ತಾ ಇರೋದೆ!

ಅಂಕಲ್ ನೀವು ಯಾವಾಗಲೂ ಬ್ಯುಸಿ ಇರ್ತಿರಾ ಅಲ್ವಾ.. ಮಕ್ಕಳಿಗೆ ಹೇಳಿ ಕೊಡ್ತೀರಾ!
ನೋಡು ಮರಿ ನನಗೆ ಈಗ ಮೊಮ್ಮಕ್ಕಳಿಲ್ಲ.  ನೀವು ಎಲ್ಲ ನನ್ನ ಮೊಮ್ಮಕ್ಕಳು ಇದ್ದಂತೆ.. ಈ ವಿಚಾರ ನನ್ನ ಮಗನಿಗೆ ತಿಳಿಸುತ್ತೇನೆ.. ನನಗೂ ಮೊಮ್ಮಗೂ ಬೇಕು ಎಂದು ಅನಿಸುತ್ತಿದೆ.

ಆಲಮಟ್ಟಿ ಜಲಾಶಯಕ್ಕೆ ಬೊಮ್ಮಾಯಿ ಬಾಗಿನ

ಸರ್ ನಾವು ತುಂಬಾ ಸಿನಿಮಾದಲ್ಲಿ ನೋಡಿದ್ದೇವೆ.. ಸಿಎಂ ಆ ತರ ಇರ್ತಾರೆ.. ಈ ತರ ಇರ್ತಾರೆ.. ನೀವೇನು ಇಷ್ಟು ಸಿಂಪಲ್ ಆಗಿದ್ದೀರಾ?
ಅದು ಸಿನಿಮಾ ಕಣೋ.. ಸಿನಿಮಾದಲ್ಲಿ ಆರ್ಭಟ ಇರಲೇಬೇಕು.. ನಾವು ಆರ್ಭಟ ಮಾಡಿದರೆ ಕೇಳೋದಿಲ್ಲ.

ನಿಮ್ಮ ಫೆವರೇಟ್ ನಾಯಕಿ ಯಾರು?
ಇದು ಬಹಳ ಟಫ್ ಕ್ವಶ್ಚನ್.. ನನ್ನ ಆಲ್ ಟೈಮ್ ಫೆವರೇಟ್ ನಾಯಕಿ ಮಧುಬಾಲ.. ಕನ್ನಡಲ್ಲಿ ಜಯಂತಿ, ಭಾರತಿ, ಕಲ್ಪನಾ ಎಂದು ತಿಳಿಸಿದರು.

ನಿಮ್ಮ ಫೆವರೇಟ್ ಹೀರೋ?
ಡಾ. ರಾಜ್ ಕುಮಾರ್ ಕಣಪ್ಪಾ

ನಿಮ್ಮ ತಂದೆಯಿಂದ ಯಾವ ಪಾಠ ಕಲಿತುಕೊಂಡ್ರಿ?
ಒಂದು ಸಾರಿ ನನ್ನ ತಂದೆಯ ಜತೆ ವಾದ ಮಾಡಿದ್ದೆ. ನಂತರ ಅದರಲ್ಲಿ ನನ್ನ ತಪ್ಪಿರುವುದು ಗೊತ್ತಾಯಿತು.  ನಂತರ ಬೇಗ ಕೋಪ ಮಾಡಿಕೊಳ್ಳಬಾರದು.. ಪುಸ್ತಕ ಓದುವುದನ್ನು ಕಲಿ ಎಂದರು ಅಲ್ಲಿಂದ ಪಾಲಿಸಿಕೊಂಡು ಬಂದೆ.

ನಿಮ್ಮ ಫೆವರೇಟ್ ಹಾಡು ಯಾವುದು?
ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು.. ಇನ್ನೊಂದು ಫೆವರೇಟ್ ಹಾಡು  ಬಾನಿಗೊಂದು ಎಲ್ಲೇ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ.. ಏಕೆ ಕನಸು ಕಾಣುವೆ..ನಿಧಾನಿಸು ನಿಧಾನಿಸು..

ನಾನು ಸಿಎಂ... ಸಿಎಂ ಅಂದರೆ ಕಾಮನ್ ಮ್ಯಾನ್ ...   ಇಷ್ಟು ಹೇಳಿದ ಬೊಮ್ಮಾಯಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು.

 

Follow Us:
Download App:
  • android
  • ios