Asianet Suvarna News Asianet Suvarna News

ತ್ರಿವಳಿ ತಲಾಖ್ ಗೆ 3 ವರ್ಷ ಜೈಲು : ಸುಗ್ರೀವಾಜ್ಞೆಗೆ ಸಿದ್ಧತೆ

ಮುಸ್ಲಿಂ ಸಮುದಾಯದ ವಿವಾದಾತ್ಮಕ ‘ತ್ರಿವಳಿ ತಲಾಖ್’ ಅನ್ನು ಅಪರಾಧೀಕರಣಗೊಳಿಸುವ ಮಸೂದೆ ರಾಜ್ಯಸಭೆಯಲ್ಲಿ ಪಾಸಾಗದೇ ಬಾಕಿ ಉಳಿದ ಕಾರಣಕೇಂದ್ರ, ಸರ್ಕಾರವು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಪರಿಶೀಲನೆ ನಡೆಸುತ್ತಿದೆ. 

Government to move Ordinance for new law on triple talaq, 3-year jail term for guilty

ನವದೆಹಲಿ: ಮುಸ್ಲಿಂ ಸಮುದಾಯದ ವಿವಾದಾತ್ಮಕ ‘ತ್ರಿವಳಿ ತಲಾಖ್’ ಅನ್ನು ಅಪರಾಧೀಕರಣಗೊಳಿಸುವ ಮಸೂದೆ ರಾಜ್ಯಸಭೆಯಲ್ಲಿ ಪಾಸಾಗದೇ ಬಾಕಿ ಉಳಿದ ಕಾರಣಕೇಂದ್ರ, ಸರ್ಕಾರವು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಪರಿಶೀಲನೆ ನಡೆಸುತ್ತಿದೆ. 

‘ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ’ ಹೆಸ ರಿನ ಈ ಮಸೂದೆ ಲೋಕಸಭೆಯಲ್ಲಿ ಪಾಸಾದರೂ ಇದರಲ್ಲಿನ ಅಂಶಗಳ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ಎತ್ತಿರುವ ಕಾರಣ ಪಾಸಾ ಗಿಲ್ಲ. ಹೀಗಾಗಿ ಈಗ ಸುಗ್ರೀವಾಜ್ಞೆ ಹೊರಡಿಸಿ, ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಅಧ್ಯಾದೇಶವನ್ನು ಪಾಸು ಮಾಡಿಸಿಕೊಳ್ಳುವ ಗುರಿಯನ್ನು ಮೋದಿ ಸರ್ಕಾರ ಇರಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ. 

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ ಎಂದು ಮೋದಿ ಸಂಪುಟದ ಇಬ್ಬರು ಮಂತ್ರಿಗಳು ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ರಿಪಬ್ಲಿಕ್ ಟೀವಿ’ಗೆ ಖಚಿತಪಡಿಸಿದ್ದಾರೆ. ತ್ರಿವಳಿ ತಲಾಖ್ ಮಸೂದೆಯು ‘ಹಠಾತ್ ತ್ರಿವಳಿ ತಲಾ ಖ್’ಅನ್ನು ನಿರ್ಬಂಧಿಸುತ್ತದೆ. ಅಲ್ಲದೆ, ೩ ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Follow Us:
Download App:
  • android
  • ios