Asianet Suvarna News Asianet Suvarna News

ಬಿಗ್​ಬಾಸ್​​ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​; 15 ವಿಜೇತರಿಗೆ ದೊಡ್ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ!

ಬಿಗ್​ಬಾಸ್​​ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​; 15 ವಿಜೇತರಿಗೆ ದೊಡ್ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಸಿಗಲಿದೆ. ಮಾಡಬೇಕಿರುವುದು ಏನು? 
 

After Salman Khan requested, Bigg Boss has launched a contest for 15 lucky fans to  stay  suc
Author
First Published Jan 17, 2024, 11:18 AM IST

 ಬಿಗ್​ಬಾಸ್​ನಲ್ಲಿ ವೈಲ್ಡ್​ಕಾರ್ಡ್​ ಎಂಟ್ರಿ ಎಂದು ಒಂದಿಷ್ಟು ಅತಿಥಿಗಳು ಆಗಮಿಸುವುದು ಎಲ್ಲರಿಗೂ ತಿಳಿದೇ ಇದೆ. ಇಂಥ ಒಂದು ಅವಕಾಶ ತಮಗೂ ಸಿಕ್ಕರೆ ಹೇಗಿರುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಹಲವು ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನೋಡಲು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಒಮ್ಮೆ ತಮಗೂ ಬಿಗ್​ಬಾಸ್​ ಮನೆಗೆ ಹೋಗಲು ಅವಕಾಶ ಸಿಕ್ಕರೆ ಹೇಗೆ ಎಂದು ಕಾತರರಾಗಿರುವವರೇ ಹೆಚ್ಚು. ಅಂಥವರಿಗಾಗಿ ಬಿಗ್​ಬಾಸ್ ಬಹುದೊಡ್ಡ ಸರ್​ಪ್ರೈಸ್​ ನೀಡಿದೆ. 15 ಮಂದಿ ಸ್ಪರ್ಧಾ ವಿಜೇತರಿಗೆ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಆ ಲಕ್ಕಿಗಳು ಯಾರು ಎಂದು ಶೀಘ್ರದಲ್ಲಿಯೇ ನಿರ್ಧಾರವಾಗಲಿದೆ. ಇದಕ್ಕಾಗಿ ಮೇಕ್​ಮೈ ಟ್ರಿಪ್​ ಜೊತೆ ಬಿಗ್​ಬಾಸ್​ ಒಪ್ಪಂದ  ಮಾಡಿಕೊಂಡಿದ್ದು, ಅದು ಹೇಳಿದ ನಿಯಮವನ್ನು ಪಾಲಿಸಬೇಕಿದೆ.

ಅಷ್ಟಕ್ಕೂ ಇಂಥದ್ದೊಂದು ಅವಕಾಶವನ್ನು ನೀಡುತ್ತಿರುವುದು ಹಿಂದಿಯ ಬಿಗ್​ಬಾಸ್​. ಇದೇ ಮೊದಲ ಬಾರಿಗೆ ​ಅಭಿಮಾನಿಗಳನ್ನು ಬಿಗ್​ಬಾಸ್​ ಮನೆಗೆ ಬಿಡಲು ಸಲ್ಮಾನ್​ ಖಾನ್​ ನಿರ್ಧರಿಸಿದ್ದಾರೆ. ಈ ಬಗ್ಗೆ ಬಿಗ್​ಬಾಸ್​ ಜೊತೆ ಅವರು ಮನವಿ ಮಾಡಿಕೊಂಡಿರುವ ವಿಡಿಯೋ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅವರು,  ಫಿನಾಲೆಯ ಬಳಿಕ ಬಿಗ್​ಬಾಸ್​  ಮನೆಯಲ್ಲಿ ಉಳಿದುಕೊಳ್ಳಲು ಅಭಿಮಾನಿಗಳಿಗೆ ಅವಕಾಶ ನೀಡುವಂತೆ ಅವರು ಕೋರಿಕೊಂಡಿದ್ದರು. ಯಾವಾಗ ಏನು ಎಂಬ ಬಗ್ಗೆ ಇನ್ನೂ ಬಹಿರಂಗಗೊಳ್ಳಲಿಲ್ಲ. ಎಷ್ಟು ಮಂದಿಗೆ ಈ ಅವಕಾಶ ಸಿಗಲಿದೆ ಎನ್ನುವುದು ಹೇಳಿರಲಿಲ್ಲ.   

ಕೈಯಿಂದ ಶೂಸ್‌ ತೆಗೆದು ದೀಪ ಹಚ್ಚಿದ ವರುಣ್‌, ಫಾಲೋ ಮಾಡಿದ ಕರಣ್‌, ಉಫ್‌ ಜಾಹ್ನವಿ ಮಾಡಿದ್ದೇನು?

ಆದರೆ ಇದೀಗ 15 ಮಂದಿಗೆ ಎನ್ನುವುದು ಸಲ್ಮಾನ್​ ಖಾನ್​ ತಿಳಿಸಿದ್ದಾರೆ. ಅಷ್ಟಕ್ಕೂ ಇದು ಮೇಕ್​ ಮೈ ಟ್ರಿಪ್​ ಜೊತೆಗಿನ ಒಪ್ಪಂದವಾಗಿದ್ದು, ಅಲ್ಲಿ ಲಾಗಿನ್​ ಆಗುವ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಬಿಗ್​ಬಾಸ್​ ಫಿನಾಲೆ ಶೀಘ್ರದಲ್ಲಿಯೇ ನಡೆಯಲಿದ್ದು, ಅದಾದ ಬಳಿಕ 15 ಮಂದಿ ಲಕ್ಕಿಗಳಿಗೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಸಿಗಲಿದೆ. ಹೀಗೆ ಉಳಿದುಕೊಳ್ಳುವವರು ಏನು ಮಾಡಲಿದ್ದಾರೆ ಎಂಬಿತ್ಯಾದಿ ಕುತೂಹಲ ಇನ್ನೂ ಉಳಿದುಕೊಂಡಿದೆ. 

ಅಂದಹಾಗೆ, ಬಿಗ್​ಬಾಸ್​ ಸೀನ್​ 17 ಶುರುವಾಗಿ ಹಲವು ವಾರಗಳೇ ಕಳೆದಿದ್ದು, ಇನ್ನೇನು ಫಿನಾಲೆ ಹತ್ತಿರವಾಗಿದೆ. ಅಂತಿಮ ಕ್ಷಣಗಳು ಹತ್ತಿರವಾಗುತ್ತಿದ್ದಂತೆಯೇ ಒಳಗಡೆ ಇರುವ ಸ್ಪರ್ಧಿಗಳ ಟಾಸ್ಕ್ ಭರಾಟೆ, ತಾವೇ ಗೆಲ್ಲಬೇಕು ಎನ್ನುವ ಛಲ ಹೆಚ್ಚುತ್ತಲೇ ಸಾಗಿದೆ. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಬಿಗ್​ಬಾಸ್​​ ಮೇಲಿನ ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ.  ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್​  ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್​ಗಳು ಶೇರ್​ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಹೀಗೆ ಬೈದುಕೊಳ್ಳಲಾದರೂ ಇವರಿಗೆ ಈ ಷೋ ನೋಡಬೇಕು! ಇದೀಗ ಜನ ಸಾಮಾನ್ಯರು ಹೋದ ಮೇಲೆ ಬಿಗ್​ಬಾಸ್​ ಪ್ರದರ್ಶನ ಹೇಗಿರಲಿದೆ ಎನ್ನುವ ಕುತೂಹಲ ಜನರದ್ದಾಗಿದೆ. 

ದೇಶ ಭಕ್ತಿಯ ಸಿನಿಮಾದಲ್ಲಿ ದೀಪಿಕಾ ಬೆತ್ತಲೆ! ಹೃತಿಕ್‌ ಜೊತೆಗಿನ ಹಸಿಬಿಸಿ ದೃಶ್ಯ ನೋಡಿ ಪತಿ ರಣಬೀರ್‌ ಹೇಳಿದ್ದೇನು?

Follow Us:
Download App:
  • android
  • ios