ತುಮಕೂರು(ಅ.19): ಸಿದ್ದರಾಮಯ್ಯ ಇಲ್ಲಿ ತನಕ ಅಪ್ಪಿ ತಪ್ಪಿಯೂ ಎಲ್ಲೂ ಸಿಕ್ಕಾಕೊಂಡಿಲ್ಲ, ಮುಂದೊಂದಿನ ಸಿಕ್ಕಾಕಿಕೊಳ್ತಾನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಭವಿಷ್ಯ ನುಡಿದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಎಲ್ಲರೂ ಉಗ್ರಗಾಮಿಗಳಾಗಿ ಜೈಲು ಹೋಗ್ತಾ ಇದ್ದಾರೆ ಇವನು ಒಂದು ದಿನ ಜೈಲಿಗೆ ಹೋಗ್ತಾನೆ. ಸಿದ್ದರಾಮಯ್ಯ ಮನಿಟೆರರಿಸ್ಟ್ ,ಜಾತಿ ಟೆರರಿಸ್ಟ್ ಎಂದು ಕಿಡಿ ಕಾರಿದ್ದಾರೆ.

'ಗುಂಡೂರಾವ್ KPCC ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಸತ್ತೋಯ್ತು'..!

ಸಿದ್ದರಾಮಯ್ಯ ಸಾವರ್ಕರ್ ವಿರುದ್ದ ಹೇಳಿಕೆ ನೀಡಿದ್ದರ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಇವನು ಅಪ್ಪಿ ತಪ್ಪಿ ಎಲ್ಲೂ ಸಿಕ್ಕಾಕ್ಕಂಡಿಲ್ಲಾ ಮುಂದೊಂದು ದಿನ ಸಿಕ್ಕಾಕಿಕ್ಕೋಳ್ತಾನೆ. ಇವನ ಹೇಳಿಕೆ ಎಲ್ಲವೂ ಮುಂದೆ ಸಿಕ್ಕಾಕಿಕೊಳ್ಳೋ ಮುನ್ಸೂಚನೆ ಎಂದಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸ್ತಾರೆ:

ಸಿದ್ದರಾಮಯ್ಯ ಹೇಳಿಕೆಯಿಂದ ಬಿಜೆಪಿಗೆ ಲಾಭವೇ ಹೊರತು ನಷ್ಟವಿಲ್ಲ. ಅವರು ಕಾಂಗ್ರೆಸ್ ಮುಗಿಸಲು ಹೊರಟಿದ್ದಾರೆ. ಖರ್ಗೆಯಂತಹ ಹಿರಿಯ ನಾಯಕರು ಯಾಕೆ ಮಾತನಾಡಲ್ಲ. ಸಿದ್ದರಾಮಯ್ಯ ದುರಂಕಾರ ಮಿತಿಮೀರಿದೆ. ಹಾಗಾಗಿ ಅವರ ಪಕ್ಷದ 17 ಜನರು ಅವರ ಸ್ನೇಹಿತರೆ ಹೊರಹೋದ್ರು ಎಂದಿದ್ದಾರೆ.

 ಬೋಡಮ್ಮ ತುರಬು ನೆನೆಸಿಕೊಂಡಂಗೆ

ಬೋಡಮ್ಮ ತುರಬು ನೆನೆಸಿಕೊಂಡಂಗೆ ಸಿದ್ದರಾಮಯ್ಯ ಪರಿಸ್ಥಿತಿ ಇದೆ. ತನ್ನ ಖ್ಯಾತಿ ಕಡಿಮೆ ಆಗುತ್ತಿದ್ದನ್ನ ಮರು ಪಡೆಯಲು ಈ ರೀತಿ ಹೇಳಿಕೆ ಕೊಡ್ತಾನೆ. ದೀಪ ಆರುವಾಗ ಜೋರಾಗಿ ಉರಿಯುವ ಹಾಗೇ ಇವರ ಪರಿಸ್ಥಿತಿ ಎಂದು ವ್ಯಂಗ್ಯ ಮಾಡಿದ್ದಾರೆ.

ಜಾತಿ ವಿಭಜನೆ ಮಾಡ್ತಿದ್ದಾನೆ

ಸಿದ್ದರಾಮಯ್ಯರದ್ದು ದೇಶದ್ರೋಹಿ ಹೇಳಿಕೆ. ದೇಶ ಪ್ರೇಮಿಗಳನ್ನ ಈ ರೀತಿ ಅವಮಾನಿಸುವ ಸಿದ್ದರಾಮಯ್ಯ ಒಬ್ಬ ದೇಶ ದ್ರೋಹಿ. ಇಂದಿರಾಗಾಂಧಿಯವರೇ ಸಾವರ್ಕರ್ ಅವರನ್ನ ಗೌರವಿಸಿದ್ರು. ಸಿದ್ದರಾಮಯ್ಯ ನ ಸರ್ವಿಸ್ ಏನು.? ಎಲ್ಲೋ ಅಪ್ಪಿತಪ್ಪಿ ಮನುಷ್ಯನಾಗಿ ಹುಟ್ಟಿ ಜಾತಿ ಜಾತಿ ವಿಭಜನೆ ಮಾಡ್ತಿದ್ದಾನೆ.

ಅದೃಷ್ಟದಿಂದ ಸಿಎಂ ಆದ

ಅವನ ಅದೃಷ್ಟ ಸಿಎಂ ಆಗಿಬಿಟ್ಟ. ರಾಹುಲ್ ಗಾಂಧಿ ಅನ್ಫಿಟ್ ಅಂತಾ ಹೇಳಿ ತಾನು ಲೀಡರ್ ಆಗಿ ಹೊರಟಿದ್ದಾನೆ. ಅವರನ್ನೆಲ್ಲಾ ಇಟಲಿಗೆ ಕಳಿಸಿ ಇಲ್ಲಿ ಲೀಡರ್ ಆಗ್ತಾ ಇದ್ದಾನೆ. ಇವನು ಅಂಡಮಾನ್ ಹೋದರೆ ಸಾವರ್ಕರ್ ಎಲ್ಲಿದ್ರೂ ಅಂತಾ ಗೊತ್ತಾಗುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ. ಬಿ. ಸಿದ್ದಯ್ಯ ಇನ್ನಿಲ್ಲ