* ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆದ್ದ ಭಾರತ* ಒಲಿಂಪಿಕ್ಸ್‌ ಪದಕ ವಿಜೇತರಿಗೆ ಬಿಸಿಸಿಐ ಬಂಪರ್ ಬಹುಮಾನ* ನೀರಜ್ ಚೋಪ್ರಾಗೆ ಹರಿದು ಬಂತು 9 ಕೋಟಿ ರುಪಾಯಿ ಬಹುಮಾನ

ನವದೆಹಲಿ(ಆ.08): ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಐತಿಹಾಸಿಕ ಚಿನ್ನ ಗೆದ್ದ ಬೆನ್ನಲ್ಲೇ ಬಿಸಿಸಿಐ ಚೋಪ್ರಾ ಸೇರಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ನಗದು ಬಹುಮಾನ ಘೋಷಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಟ್ವೀಟ್‌ ಮಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ‘ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ 1 ಕೋಟಿ, ಬೆಳ್ಳಿ ಗೆದ್ದ ರವಿ ದಹಿಯಾ, ಮೀರಾಭಾಯಿ ಚಾನುಗೆ ತಲಾ 50 ಲಕ್ಷ, ಕಂಚು ಗೆದ್ದ ಪಿ.ವಿ.ಸಿಂಧು, ಭಜರಂಗ್‌ ಪೂನಿಯಾ, ಲವ್ಲೀನಾ ಬೊರ್ಗೊಹೈನ್‌ಗೆ ತಲಾ 25 ಲಕ್ಷ ಹಾಗೂ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

Scroll to load tweet…

ನೀರಜ್‌ಗೆ 9 ಕೋಟಿ ರುಪಾಯಿ ಬಹುಮಾನ..!

ಚಂಡೀಗಢ: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಹರಿದು ಬರುತ್ತಿದ್ದು, ಸರಕಾರಿ ಉದ್ಯೋಗ, ನಿವೇಶನದ ಜೊತೆ 9 ಕೋಟಿ ರೂ. ಬಹುಮಾನವೂ ಸಿಗಲಿದೆ.

ಚಿನ್ನ ಗೆದ್ದ ನೀರಜ್‌ಗೆ ಮಹೀಂದ್ರಾದಿಂದ XUV 700 ಗಿಫ್ಟ್!

ಹರ್ಯಾಣ ಮುಖ್ಯಮಂತ್ರಿ ಮನೋಹರ್‌ ಖಟ್ಟರ್‌ 6 ಕೋಟಿ ರು. ಬಹುಮಾನ, ಸರ್ಕಾರಿ ನೌಕರಿ, ಶೇ.50 ರಿಯಾಯ್ತಿಯಲ್ಲಿ ನಿವೇಶನ ಘೋಷಿಸಿದರೆ, ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ 2 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದಾರೆ.