Asianet Suvarna News Asianet Suvarna News

ಟೋಕಿಯೋ 2020: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಪೈಲ್ವಾನ್‌ ಭಜರಂಗ್ ಪೂನಿಯಾ

* ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತದ ಫೈಲ್ವಾನ್ ಭಜರಂಗ್ ಪೂನಿಯಾ

* ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ 11-5 ಅಂಕಗಳ ಸೋಲು

* ಶನಿವಾರ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿರುವ ಪೂನಿಯಾ 

Tokyo 2020 Indian Wrestler Bajrang Punia goes down Against Haji Aliyev in 65kg wrestling semifinals kvn
Author
Tokyo, First Published Aug 6, 2021, 3:32 PM IST
  • Facebook
  • Twitter
  • Whatsapp

ಟೋಕಿಯೋ(ಆ.06): ಸಾಕಷ್ಟು ರೋಚಕತೆಯಿಂದ ಕೂಡಿದ್ದ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ಕುಸ್ತಿಯ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ 2ನೇ ಶ್ರೇಯಾಂಕಿತ ಭಜರಂಗ್ ಪೂನಿಯಾ 5-12 ಅಂಕಗಳ ಅಂತರದಲ್ಲಿ ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ ಎದುರು ಆಘಾತಕಾರಿ ಸೋಲು ಕಂಡಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೇರುವ ಭಜರಂಗ್ ಕನಸು ಭಗ್ನವಾಗಿದೆ 

65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ಕುಸ್ತಿ ಪಂದ್ಯದಲ್ಲ ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ ಎದುರು ಭಜರಂಗ್ ಪೂನಿಯಾ ಆರಂಭದಲ್ಲಿ ಒಂದು ಅಂಕ ಪಡೆದರು. ಆದರೆ ಹಾಜಿ ಆಲಿಯಾವ್‌ ತನ್ನ ಬಿಗಿಪಟ್ಟು ಹಾಕುವ ಮೂಲಕ ಪೂನಿಯಾ ಮೇಲೆ ಮೇಲುಗೈ ಸಾಧಿಸಿದರು. ಮೊದಲ ಸುತ್ತಿನ ಮುಕ್ತಾಯದ ವೇಳೆಗೆ 4-1ರ ಮುನ್ನಡೆ ಸಾಧಿಸಿದರು.

ಟೋಕಿಯೋ 2020: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್‌ ಭಜರಂಗ್ ಪೂನಿಯಾ

ಇನ್ನು ಎರಡನೇ ಸುತ್ತಿನಲ್ಲಿ ಮತ್ತಷ್ಟು ಆಕ್ರಮಣಕಾರಿ ಪಟ್ಟು ಮುಂದುವರೆಸಿದ ಹಾಜಿ ಆಲಿಯಾವ್‌ ನಿರಂತರ ಅಂಕ ಗಳಿಸುತ್ತಲೇ ಸಾಗಿದರು. ಅಂತಿಮವಾಗಿ 12-5 ಅಂಕಗಳ ಅಂತರದಲ್ಲಿ ಹಾಜಿ ಆಲಿಯಾವ್‌ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟರು. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲಬಲ್ಲ ನೆಚ್ಚಿನ ಕುಸ್ತಿಪಟುಗಳಲ್ಲಿ ಭಜರಂಗ್ ಪೂನಿಯಾ ಕೂಡಾ ಒಬ್ಬರೆನಿಸಿದ್ದರು. ವಿಶ್ವ ನಂ.2ನೇ ಶ್ರೇಯಾಂಕಿತ ಭಜರಂಗ್ ಪೂನಿಯಾ ಆಗಸ್ಟ್‌ 07ರಂದು ನಡೆಯಲಿರುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಕಾದಾಡಲಿದ್ದಾರೆ. 

Follow Us:
Download App:
  • android
  • ios