Asianet Suvarna News Asianet Suvarna News

ಟೋಕಿಯೋ 2020 : 41 ವರ್ಷಗಳ ಬಳಿಕ ಪದಕ ಗೆಲ್ಲುತ್ತಾ ಭಾರತ ಹಾಕಿ ತಂಡ?

* ಕಂಚಿನ ಪದಕಕ್ಕಾಗಿಂದು ಭಾರತ-ಜರ್ಮನಿ ಹಾಕಿ ತಂಡಗಳು ಕಾದಾಟ

* 41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ಹಾಕಿ ತಂಡ

* ಪದಕದ ಬರ ನೀಗಿಸುತ್ತಾ ಮನ್‌ಪ್ರೀತ್ ಸಿಂಗ್ ಪಡೆ

Tokyo 2020 Indian Mens Hockey Team Take on Germany in Bronze Medal Match kvn
Author
Tokyo, First Published Aug 5, 2021, 7:06 AM IST

ಟೋಕಿಯೋ(ಆ.05): ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಬೆಲ್ಜಿಯಂ ವಿರುದ್ಧ ಸೋಲು ಕಂಡು ನಿರಾಸೆಗೊಂಡ ಭಾರತ ಪುರುಷರ ಹಾಕಿ ತಂಡ, ಗುರುವಾರ ಕಂಚಿನ ಪದಕ ಗೆಲ್ಲಲು ಜರ್ಮನಿ ವಿರುದ್ಧ ಹೋರಾಡಲಿದೆ. 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತ ತಂಡಕ್ಕೆ ಪದಕ ಗೆಲ್ಲಿಸಿಕೊಡುವ ಗುರಿ ಮನ್‌ಪ್ರೀತ್‌ ಸಿಂಗ್‌ ಪಡೆಯದ್ದಾಗಿದೆ.

ಸೆಮೀಸ್‌ನಲ್ಲಿ ವಿಶ್ವ ನಂ.3 ಭಾರತದ ರಕ್ಷಣಾ ಪಡೆ ವೈಫಲ್ಯ ಕಂಡಿತ್ತು. ಪಂದ್ಯದಲ್ಲಿ ಬರೋಬ್ಬರಿ 14 ಪೆನಾಲ್ಟಿಕಾರ್ನರ್‌ಗಳನ್ನು ಭಾರತ ಬಿಟ್ಟುಕೊಟ್ಟಿತ್ತು. ಜರ್ಮನಿ ವಿರುದ್ಧ ಸುಧಾರಿತ ಪ್ರದರ್ಶನ ತೋರುವ ಒತ್ತಡ ಭಾರತದ ಮೇಲಿದೆ. ನಾಲ್ವರು ವಿಶ್ವ ಶ್ರೇಷ್ಠ ಡ್ರ್ಯಾಗ್‌ ಫ್ಲಿಕರ್‌ಗಳಾದ ರೂಪಿಂದರ್‌ ಪಾಲ್‌, ಹರ್ಮನ್‌ಪ್ರೀತ್‌, ವರುಣ್‌ ಕುಮಾರ್‌ ಹಾಗೂ ಅಮಿತ್‌ ರೋಹಿದಾಸ್‌ ತಂಡದಲ್ಲಿದ್ದರೂ ಭಾರತ, ಪೆನಾಲ್ಟಿಕಾರ್ನರ್‌ ಅವಕಾಶಗಳಲ್ಲಿ ಗೋಲು ಗಳಿಸದೆ ಇರುವುದು ತಂಡದ ಚಿಂತೆಗೆ ಕಾರಣವಾಗಿದೆ. ಮನ್‌ಪ್ರೀತ್‌ ಸಿಂಗ್‌ ಮುಂದಾಳತ್ವದ ಮಿಡ್‌ಫೀಲ್ಡರ್‌ಗಳ ಮೇಲೂ ಭಾರೀ ಒತ್ತಡವಿದೆ.

2008, 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜರ್ಮನಿ, 2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ತಂಡ ಸತತ 4ನೇ ಬಾರಿಗೆ ಪದಕ ಗೆಲ್ಲುವ ಗುರಿ ಹೊಂದಿದೆ. ಸ್ಟೆ್ರೖಕರ್‌ ಲುಕಾಸ್‌ ವೆಂಡ್‌ಫೆಡರ್‌ ಈಗಾಗಲೇ ಟೂರ್ನಿಯಲ್ಲಿ 6 ಗೋಲು ಬಾರಿಸಿ ಉತ್ಕೃಷ್ಟಲಯದಲ್ಲಿದ್ದಾರೆ. ಇವರೊಂದಿಗೆ ಫೆä್ಲೕರಿಯನ್‌ ಫುಚ್‌್ಸ, ಕ್ರಿಸ್ಟೋಫರ್‌ ರುರ್‌ ಅವರ ಬಲವೂ ವಿಶ್ವ ನಂ.4 ಜರ್ಮನಿ ತಂಡಕ್ಕಿದೆ.

ಈ ವರ್ಷ ಮಾರ್ಚ್‌ನಲ್ಲಿ  ಜರ್ಮನಿ ಪ್ರವಾಸ ಕೈಗೊಂಡಿದ್ದ ವೇಳೆ ಆತಿಥೇಯರ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ 6-1 ಗೋಲುಗಳ ಜಯಗಳಿಸಿತ್ತು. ಮತ್ತೊಂದು ಪಂದ್ಯವನ್ನು 1-1ರಲ್ಲಿ ಡ್ರಾ ಮಾಡಿಕೊಂಡಿತ್ತು. ಆ ಪ್ರವಾಸದಲ್ಲಿ ತೋರಿದ್ದ ಪ್ರದರ್ಶನವನ್ನು ಭಾರತ ಮತ್ತೊಮ್ಮೆ ತೋರಬೇಕಿದೆ. ಚಿನ್ನದ ಪದಕಕ್ಕಾಗಿ ಆಸ್ಪ್ರೇಲಿಯಾ ಹಾಗೂ ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಲಿವೆ.

ಭಾರತ-ಜರ್ಮನಿ ಕಂಚಿನ ಪದಕದ ಪಂದ್ಯ: ಬೆಳಗ್ಗೆ 7ಕ್ಕೆ, 

ನೇರ ಪ್ರಸಾರ: ಸೋನಿ ಟೆನ್‌

Follow Us:
Download App:
  • android
  • ios