ಪ್ರಧಾನಿ ಮೋದಿ ನೀಡಿದ ನೆರವು ಬಹಿರಂಗ ಪಡಿಸಿದ ಮೀರಾಬಾಯಿ ಚಾನು ಮಣಿಪುರ ಸಿಎಂನಿಂದ ಮೋದಿ ನೆರವು ಹೇಳಿಕೆ ಬೆನ್ನಲ್ಲೇ ಪರ ವಿರೋಧ ಚರ್ಚೆ ಅಮೆರಿಕ ತೆರಳಿ ಚಿಕಿತ್ಸೆ ಪಡೆಯಲು ವಿಮಾನ ಟಿಕೆಟ್, ಅಲ್ಲಿನ ಚಿಕಿತ್ಸೆ ಮೋದಿ ನೆರವು

ನವದೆಹಲಿ(ಆ.06): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವೇಯ್ಟ್ ಲಿಫ್ಟ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಪಡೆದ ಮೊದಲ ಪದಕ ಇದಾಗಿದೆ. ಇದೀಗ ಮೀರಾಬಾಯಿ ಚಾನು ಚಿಕಿತ್ಸೆಗೆ, ತರಬೇತಿಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಿದ್ದರು ಅನ್ನೋ ಮಣಿಪುರ ಸಿಎಂ ಹೇಳಿಕೆ ಭಾರಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಖುದ್ದ ಮೀರಾ ಬಾಯಿ ಚಾನು ಮೋದಿ ನೆರವನ್ನು ಬಹಿರಂಗಪಡಿಸಿದ್ದಾರೆ.

ಫ್ರೀ ಲಿಫ್ಟ್ ಕೊಡ್ತಿದ್ದ ಟ್ರಕ್ ಚಾಲಕರಿಗೆ ಥ್ಯಾಂಕ್ಸ್ ಹೇಳಿದ ಚಾನು

ಮೀರಾಬಾಯಿ ಚಾನುಗೆ ಉತ್ತಮ ಚಿಕಿತ್ಸೆ ಹಾಗೂ ತರಬೇತಿಗೆ ಪ್ರಧಾನಿ ಮೋದಿ ನೆರವು ನೀಡಿದ್ದರು ಎಂದು ಸಿಎಂ ಬಿರೆನ್ ಸಿಂಗ್ ಹೇಳಿದ್ದರು. ಈ ಮಾತಿನ ಬೆನ್ನಲ್ಲೇ ಮೀರಾಬಾಯಿ ಪದಕ ಗೆದ್ದ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮೀರಾಬಾಯಿ ಚಾನು ಮೋದಿ ನೆರವನ್ನು ನೆನಪಿಸಿಕೊಂಡಿದ್ದಾರೆ.

Scroll to load tweet…

ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

ಹೌದು, ಮೋದಿ ನರವು ನಿಜ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮೊದಲು ಪ್ರಧಾನಿ ಮೋದಿ ನನಗೆ ನೆರವು ನೀಡಿದ್ದಾರೆ. ಚಿಕಿತ್ಸೆಗಾಗಿ ಅಮೆರಿಕ ತೆರಳಲು ವಿಮಾನ ಟಿಕೆಟ್, ಅಲ್ಲಿನ ಚಿಕಿತ್ಸೆ, ತರಬೇತಿಗೆ ಮೋದಿ ನೆರವಾಗಿದ್ದಾರೆ. ಮೋದಿಯ ಬೆಂಬಲ ಹಾಗೂ ಪ್ರೋತ್ಸಾಹ ಅಪಾರ ಎಂದು ಬೆಳ್ಳಿ ಪದಕ ವಿಜೇತ ಮೀರಾಬಾಯಿ ಚಾನು ಹೇಳಿದ್ದಾರೆ.

ವೆಯ್ಟ್ ಲಿಫ್ಟಿಂಗ್ ಸುಲಭ ಎಂದು ಆಯ್ಕೆ ಮಾಡಿಕೊಂಡೆ; ಸುವರ್ಣನ್ಯೂಸ್ ಜೊತೆ ಪದಕ ಗೆದ್ದ ಮೀರಾ ಮಾತು!

ಅಮೆರಿಕದಲ್ಲಿ ಮೀರಾಬಾಯಿ ಚಿಕಿತ್ಸೆಗೆ ಮೋದಿ ಎಲ್ಲಾ ನೆರವು ನೀಡಿದ್ದರು ಅನ್ನೋ ಚಾನು ಹೇಳಿಕೆ ನನಗೆ ಅಚ್ಚರಿಯಾಗಿತ್ತು. ಚಿಕಿತ್ಸೆ ಪಡೆಯದೇ ಇದ್ದರೆ ಇಂದು ಪದಕ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದರು. ಈ ವಿಚಾರ ಯಾರಿಗೂ ತಿಳಿದಿಲ್ಲ ಎಂದು ಸಿಎಂ ಬಿರೆನ್ ಸಿಂಗ್ ಹೇಳಿದ್ದರು.