ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನ ಗೆದ್ದ ಸುಮಿತ್ ಅಂಟಿಲ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ ಸುಮಿತ್ ಸುಮಿತ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ(ಆ.30): ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಭರ್ಜರಿ ಪದಕ ಬೇಟೆಯಾಡಿದೆ. ಇದೀಗ ಜಾವಲಿನ್ ಥ್ರೋನಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪದಕ ಗೆದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸುಮಿತ್‌ಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌: ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್‌

ಸುಮಿತ್ ಸಾಧನೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ. ಸ್ಥಿರ ಪ್ರದರ್ಶನ, ಶ್ರದ್ಧೆ ಹಾಗೂ ಕಠಿಣ ಅಭ್ಯಾಸದಿಂದ ಇದು ಸಾಧ್ಯವಾಗಿದೆ. ಯುವಕರು ಸುಮಿತ್ ಸಾಧನೆಯಿಂದ ಸ್ಪೂರ್ತಿ ಪಡೆಯುತ್ತಾರೆ. ಇಡೀ ಕುಟುಂಬವೇ ಹೆಮ್ಮೆಪಡುವಂತಾಗಿದೆ ಎಂದು ಪ್ರಧಾನಿ ಮೋದಿ ದೂರವಾಣಿ ಮೂಲಕ ಸುಮಿತ್‌ಗೆ ಅಭಿನಂದನೆ ತಿಳಿಸಿದ್ದಾರೆ.

"

ಜಾವಲಿನ್ ಥ್ರೋ ಕ್ಲಾಸ್ F64 ವಿಭಾಗದಲ್ಲಿ ಸುಮಿತ್ ಅಂಟಿಲ್ ವಿಶ್ವದಾಖಲೆ ಎಸೆತ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸುಮಿತ್ 68.55 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. 70 ಮೀಟರ್ ದೂರ ಎಸೆಯುವ ಗುರಿ ಇಟ್ಟುಕೊಂಡಿದ್ದ ಸುಮಿತ್ ಚಿನ್ನದ ಸಾಧನೆಯಿಂದ ಸಂತಸವಾಗಿರುವುದಾಗಿ ಹೇಳಿದ್ದಾರೆ.