2036, 2040ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಆಸಕ್ತಿ!
* ಒಲಿಂಪಿಕ್ಸ್ ಆಯೋಜಿಸಲು ಒಲವು ತೋರಿದ ಭಾರತ
* ಆಸ್ಪ್ರೇಲಿಯಾದ ಬಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಜರುಗಲಿದೆ
* 2036, 2040ರ ಒಲಿಂಪಿಕ್ಸ್ ಆಯೋಜಿಸಲು ಭಾರತ ಆಸಕ್ತಿ
ನವದೆಹಲಿ(ಆ.26): 2036, 2040ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಅಧ್ಯಕ್ಷ ಥೋಮಸ್ ಬಾಚ್ ತಿಳಿಸಿದ್ದಾರೆ.
ಆಸ್ಪ್ರೇಲಿಯಾದ ಬಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಆಯೋಜಿಸುವುದಾಗಿ ಕಳೆದ ತಿಂಗಳಷ್ಟೇ ಐಒಸಿ ತಿಳಿಸಿತ್ತು. ಆದರೆ 2036, 2040 ಹಾಗೂ ಅದಕ್ಕೂ ಮುಂದಿನ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಸೂಕ್ತ ಸ್ಥಳವನ್ನು ಐಒಸಿ ಪರಿಶೀಲಿಸುತ್ತಿದೆ. ‘ಭಾರತ ಸೇರಿದಂತೆ ಇಂಡೋನೇಷ್ಯಾ, ಜರ್ಮನಿ, ಕತಾರ್ ಒಲಿಂಪಿಕ್ಸ್ ಆಯೋಜನೆಗೆ ಆಸಕ್ತಿ ಹೊಂದಿವೆ’ ಎಂದು ಬಾಚ್ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಕೋಚ್ ಕಾಶೀನಾಥ್ ಮನೆಗೆ ಭೇಟಿಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ
ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಕೂಡಾ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ನಡೆದ ಐಒಸಿ ವಿಡಿಯೋ ಕಾನ್ಛರೆನ್ಸ್ ಸಭೆಯಲ್ಲಿ ಭಾರತವು 2036 ಅಥವಾ ಅದರ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ. ಭಾರತ 2032ರ ಒಲಿಂಪಿಕ್ಸ್ ಆಯೋಜನೆಗೂ ಆಸಕ್ತಿ ತೋರಿತ್ತು. ಜೊತೆಗೆ 2030ರ ಏಷ್ಯನ್ ಗೇಮ್ಸ್, 2026ರ ಕಿರಿಯರ ಒಲಿಂಪಿಕ್ಸ್ ಆತಿಥ್ಯ ಹಕ್ಕಿಗೂ ಸ್ಪರ್ಧಿಸಿತ್ತು. ಆದರೆ ಭಾರತಕ್ಕೆ ಅವಕಾಶ ದೊರೆತಿರಲಿಲ್ಲ.