* ಅಗಸ್ಟ್‌ 24ರಿಂದ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆರಂಭ* ಭಾರತದಿಂದ ಈ ಬಾರಿ ದಾಖಲೆಯ 54 ಪ್ಯಾರಾ ಅಥ್ಲೀಟ್‌ಗಳು ಭಾಗಿ* 016ರ ರಿಯೋ ಪ್ಯಾರಾಲಿಂಪಿಕ್ಸ್‌ಗೆ ಭಾರತ 19 ಕ್ರೀಡಾಪಟುಗಳನ್ನು ಕಳುಹಿಸಿತ್ತು

ನವದೆಹಲಿ(ಆ.23): 12ನೇ ಬಾರಿಗೆ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಈ ಬಾರಿ ದಾಖಲೆಯ 54 ಕ್ರೀಡಾಪಟುಗಳನ್ನು ಭಾರತ ಕಣಕ್ಕಿಳಿಸಲಿದೆ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ಗೆ ಭಾರತ 19 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಅದೇ ಈ ವರೆಗಿನ ದಾಖಲೆಯಾಗಿತ್ತು.

ಭಾರತ 11 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಒಟ್ಟು 12 ಪದಕಗಳನ್ನು ಜಯಿಸಿದೆ. 1960ರಲ್ಲಿ ಮೊದಲ ಪ್ಯಾರಾಲಿಂಪಿಕ್ಸ್‌ ನಡೆದರೂ ಭಾರತ ಮೊದಲು ಸ್ಪರ್ಧಿಸಿದ್ದು 1968ರ ಟೆಲ್‌ ಅವಿವ್‌ ಕ್ರೀಡಾಕೂಟದಲ್ಲಿ. ಅ ವರ್ಷ ಭಾರತ ಯಾವುದೇ ಪದಕ ಜಯಿಸಿರಲಿಲ್ಲ.

Scroll to load tweet…
Scroll to load tweet…

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ

1972ರ ಹೀಡೆಲ್ಬರ್ಗ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪದಕ ಖಾತೆ ತೆರೆಯಿತು. ಪುರುಷರ 50 ಮೀ. ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಮುರಳಿಕಾಂತ್‌ ಪೇಟ್ಕರ್‌ ಚಿನ್ನದ ಪದಕ ಜಯಸಿದ್ದರು. ಆ ಬಳಿಕ 1972, 1976ರಲ್ಲಿ ಭಾರತ ಮತ್ತೆ ಸ್ಪರ್ಧಿಸಿರಲಿಲ್ಲ. 1984ರಲ್ಲಿ 4 ಪದಕ ಜಯಿಸಿದ್ದ ಭಾರತ ಆ ನಂತರ ಸತತ 4 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಒಂದೂ ಪದಕ ಗೆದ್ದಿರಲಿಲ್ಲ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 2 ಚಿನ್ನ ಸೇರಿ ಒಟ್ಟು 4 ಪದಕ ಗೆದ್ದಿತ್ತು. ಭಾರತ ಒಟ್ಟಾರೆ 11 ಕ್ರೀಡಾಕೂಟಗಳಲ್ಲಿ ತಲಾ 4 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದೆ.