ಕೊರೋನಾ ಕಮ್ಮಿಯಾಗದಿದ್ರೆ 2021ಕ್ಕೂ ಒಲಿಂಪಿಕ್ಸ್ ಇಲ್ಲ..?
ಕೊರೋನಾ ಉಲ್ಬಣಿಸಿದ ಪರಿಣಾಮ 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೂಟವನ್ನು 2021ಕ್ಕೆ ಮುಂದೂಡಲಾಗಿತ್ತು. ಇದೇ ಪರಿಸ್ಥಿತಿ 2021ರವರೆಗೆ ಇದ್ದರೆ ಟೂರ್ನಿ ಮುಂದೂಡಲಾಗುವುದು ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೋಕಿಯೋ(ಜು.23): ಕೊರೋನಾ ವೈರಸ್‌ನ ಸದ್ಯದ ಪರಿಸ್ಥಿತಿ ಹೀಗೆ ಮುಂದುವರಿದರೆ 2021ರಲ್ಲಿ ನಡೆಯಬೇಕಿರುವ ಟೋಕಿಯೋ ಒಲಿಂಪಿಕ್ಸ್ ಕೂಟ ನಡೆಯುವ ಸಾಧ್ಯತೆ ಕಡಿಮೆಯಾಗಿದೆ ಎಂದು ಆಯೋಜಕ ಸಮಿತಿ ಅಧ್ಯಕ್ಷ ಯೊಶಿರೊ ಮೊರಿ ಹೇಳಿದ್ದಾರೆ.
ಜಪಾನ್‌ನ ಎನ್‌ಎಚ್‌ಕೆ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಯೊಶಿರೊ ಈ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ಉಲ್ಬಣಿಸಿದ ಪರಿಣಾಮ 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೂಟವನ್ನು 2021ಕ್ಕೆ ಮುಂದೂಡಲಾಗಿತ್ತು.
‘ಒಲಿಂಪಿಕ್ಸ್ ಕೂಟ ಮತ್ತೆ ಮುಂದೂಡಲು ಸಾಧ್ಯವಿಲ್ಲ’
2021ರ ಜುಲೈ 23 ರಿಂದ ಕೂಟ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅಲ್ಲದೇ ಪ್ರೇಕ್ಷಕರಿಲ್ಲದೇ 15 ನಿಮಿಷ ಉದ್ಘಾಟನಾ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಯೊಶಿರೊ ಹೀಗೆ ಅಭಿಪ್ರಾಯಿಸಿದ್ದಾರೆ ಎನ್ನಲಾಗಿದೆ.
ಒಲಿಂಪಿಕ್‌ವರೆಗೂ ವಿದೇಶಿ ಕೋಚ್‌ಗಳ ಅವಧಿ ವಿಸ್ತರಣೆ
ನವದೆಹಲಿ: 2021ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯದವರೆಗೂ 32 ವಿದೇಶಿ ಕೋಚ್‌ಗಳ ಒಪ್ಪಂದದ ಅವಧಿ ವಿಸ್ತರಣೆಯಾಗಲಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಹೇಳಿದೆ.
11 ಕ್ರೀಡೆಯ 32 ವಿದೇಶಿ ತರಬೇತುದಾರರ ಒಪ್ಪಂದದ ಅವಧಿ 2021ರ ಸೆಪ್ಟೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ. ಬಾಕ್ಸಿಂಗ್‌ನ ಸ್ಯಾಂಟಿಯಾಗೊ ನೀವಿಯಾ, ರಫಾಲೆ ಬೆರ್ಗಾಮಾಸ್ಕೋ, ಪುರುಷರ ಹಾಕಿ ತಂಡದ ಕೋಚ್ ಗ್ರಹಾಂ ರೀಡ್, ಶೂಟಿಂಗ್ ಕೋಚ್ ಪಾವೆಲ್ ಸ್ಮಿರ್ನೊವ್ ಸೇರಿದಂತೆ ಇತರೆ ತರಬೇತುದಾರರು ಈ ಪಟ್ಟಿಯಲ್ಲಿದ್ದಾರೆ. 32 ವಿದೇಶಿ ಕೋಚ್‌ಗಳ ಒಪ್ಪಂದದ ಅವಧಿ ಈ ವರ್ಷದ ಸೆಪ್ಟೆಂಬರ್‌ಗೆ ಅಂತ್ಯವಾಗಲಿತ್ತು.