ಯೂಟ್ಯೂಬ್ ಬಳಕೆದಾರರ ಸಂಖ್ಯೆ 1.8 ಮಿಲಿಯನ್..!

YouTube now has over 1.8 billion users every month
Highlights

ಜನಪ್ರಿಯ ಸಾಮಾಜಿಕ ತಾಣ ಯೂಟ್ಯೂಬ್‌ನ್ನು ಬಳಸುವ ನೋಂದಾಯಿತ ಚಂದಾದಾರರ ಸಂಖ್ಯೆ ಪ್ರತಿ ತಿಂಗಳಿಗೆ 1.8 ಮಿಲಿಯನ್ ತಲುಪಿದೆ. ಗೂಗಲ್ ಮಾಲೀಕತ್ವದ ಯೂಟ್ಯೂಬ್‌ನ ಸಿಇಒ ಸೂಸನ್ ವೋಜಿಕಿ ಈ ಮಾಹಿತಿ ಖಚಿತಪಡಿಸಿದ್ದಾರೆ.

ಬೆಂಗಳೂರು(ಮೇ 31): ಜನಪ್ರಿಯ ಸಾಮಾಜಿಕ ತಾಣ ಯೂಟ್ಯೂಬ್‌ನ್ನು ಬಳಸುವ ನೋಂದಾಯಿತ ಚಂದಾದಾರರ ಸಂಖ್ಯೆ ಪ್ರತಿ ತಿಂಗಳಿಗೆ 1.8 ಮಿಲಿಯನ್ ತಲುಪಿದೆ. ಗೂಗಲ್ ಮಾಲೀಕತ್ವದ ಯೂಟ್ಯೂಬ್‌ನ ಸಿಇಒ ಸೂಸನ್ ವೋಜಿಕಿ ಈ ಮಾಹಿತಿ ಖಚಿತಪಡಿಸಿದ್ದಾರೆ.

ಇದು ಅಧಿಕೃತ ಮಾಹಿತಿಯಾಗಿದ್ದು, ನೋಂದಾಯಿಸದೆ ಯೂಟ್ಯೂಬ್ ವೀಕ್ಷಿಸುವವರ ಸಂಖ್ಯೆ ಪ್ರತ್ಯೇಕವೇ ಇದೆ. ಕಳೆದ ವರ್ಷ ಯೂಟ್ಯೂಬ್ ಹಲವು ಟೀಕೆಗಳಿಗೆ ಒಳಗಾಗಿದ್ದು, ಈ ನಡುವೆ ಯೂಟ್ಯೂಬ್ ಇಂತಹ ಮೈಲಿಗಲ್ಲು ಕಟ್ಟಿದ್ದು ಗಮನಾರ್ಹ ಎನ್ನುತ್ತಾರೆ ಟೆಕ್ ಪಂಡಿತರು. ಕಳೆದ ವರ್ಷ ನೇರ ಪ್ರಸಾರದ ಸಂದರ್ಭ ಹಲವು ಬಾರಿ ಸ್ಟ್ರಕ್ ಆದ ಟೀಕೆಗೊಳಗಾಗಿತ್ತು ಯೂಟ್ಯೂಬ್. 

2017ರಲ್ಲಿ ದ್ವೇಷಪೂರಿತ ಭಾಷಣಗಳು, ಬಂದೂಕು ಹಿಂಸೆಯನ್ನು ವೈಭವೀಕರಿಸುವ ವಿಚಾರಗಳು ಇತ್ಯಾದಿಗಳನ್ನು ಪ್ರಸಾರ ಮಾಡಿದ ಆರೋಪ ಎದುರಿಸಬೇಕಾಗಿತ್ತು. ಇತ್ತೀಚೆಗೆ ನ್ಯೂಯಾರ್ಕ್ ಟೈಂಸ್ ತನ್ನ ವರದಿಯೊಂದರಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಕೌಟುಂಬಿಕ ವಿಡಿಯೋಗಳಲ್ಲೂ ಹಿಂಸಾತ್ಮಕ ಅಂಶಗಳು ತುಂಬಿವೆ, ಇವು ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಯೂಟ್ಯೂಬ್, ತಾನು ಇಂತಹ ವಿಡಿಯೋಗಳನ್ನು ಪರಿಶೀಲಕರ ಗಮನಕ್ಕೆ ಕಳುಹಿಸುವುದಾಗಿಯೂ, ಆಕ್ಷೇಪಾರ್ಹ ವಿಡಿಯೋಗಳನ್ನು ಯೂಟ್ಯೂಬ್ ಕಿಡ್ಸ್ ಆಪ್‌ನಿಂದ ಕಿತ್ತು ಹಾಕುವುದಾಗಿಯೂ ಹೇಳಿಕೊಂಡಿದೆ.?

loader