ವಾಟ್ಸಾಪ್ ಬಳಕೆದಾರರೇ ಎಚ್ಚರ : ನಿಮ್ಮ ಗೆಳೆಯರು ನಿಮ್ಮ ಮೇಲೆ ಗೂಢಚರ್ಯೆ ಮಾಡಬಹುದು

Your WhatsApp friends may be Spying on you with this App
Highlights

ಆಧುನಿಕ ತಂತ್ರಜ್ಞಾನವು ಎಷ್ಟು ಮಾನವನಿಗೆ ಅನುಕೂಲ ಕಾರಿಯಾಗಿದೆಯೋ ಅದರಲ್ಲಿ ಕೆಲವೊಂದು  ತಂತ್ರಜ್ಞಾನವು ಅಷ್ಟೇ ಪ್ರಮಾಣದಲ್ಲಿ ಕೆಲ ಸಮಯದಲ್ಲಿ ಅನಾನುಕೂಲಕಾರಿಯೂ ಕೂಡ ಆಗಿದೆ.

ನವದೆಹಲಿ : ಆಧುನಿಕ ತಂತ್ರಜ್ಞಾನವು ಎಷ್ಟು ಮಾನವನಿಗೆ ಅನುಕೂಲ ಕಾರಿಯಾಗಿದೆಯೋ ಅದರಲ್ಲಿ ಕೆಲವೊಂದು  ತಂತ್ರಜ್ಞಾನವು ಅಷ್ಟೇ ಪ್ರಮಾಣದಲ್ಲಿ ಕೆಲ ಸಮಯದಲ್ಲಿ ಅನಾನುಕೂಲಕಾರಿಯೂ ಕೂಡ ಆಗಿದೆ.

ಅದರಲ್ಲಿ ವಾಟ್ಸಾಪ್ ಎನ್ನುವ ಮೆಸೇಜಿಂಗ್ App ನ್ನು ಇದೀಗ ಕೋಟ್ಯಂತರ ಮಂದಿ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ಮೂಲಕ ನೀವು ಯಾವುದೇ ರೀತಿಯಾದ ಮಾಹಿತಿಯನ್ನು ಕೂಡ ಹಂಚಿಕೊಳ್ಳಬಹುದಾಗಿದೆ. ವಿಡಿಯೋ ಕಳಿಸುವುದು. ಮೆಸೇಜ್ ಕಳಿಸುವುದು. ಕರೆ ಮಾಡುವ ಸೌಲಭ್ಯವನ್ನೂ ಕೂಡ ವಾಟ್ಸಾಪ್’ನಲ್ಲಿ ನೀಡಲಾಗಿದೆ.

ಇದರಲ್ಲಿ ಕೆಲವೊಂದು ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡಲೂ ಸಹ ಕಂಪನಿ ಅವಕಾಶವನ್ನು ನೀಡಿದೆ. ಅದರಲ್ಲಿ ಲಾಸ್ಟ್ ಸೀನ್ ಆಫ್ ಮಾಡುವ ಸೌಲಭ್ಯವೂ ಕೂಡ ಒಂದಾಗಿದೆ.

ಆದರೆ ಕೆಲವೊಂದು App ಮೂಲಕ ನಿಮ್ಮ  ಗೆಳೆಯರು ನಿಮ್ಮ ಮೇಲೆ  ಗೂಢಚರ್ಯೆ ಮಾಡಬಹುದಾಗಿದೆ. ಅಂತಹ App ಗಳು ಕೂಡ ಇಂದು ಲಭ್ಯವಿದೆ. ಚಾಟ್ ವಾಚ್ ಎನ್ನುವ App ಮೂಲಕ ನಿಮ್ಮ  ವಾಟ್ಸಾಪ್ ಮೇಲೆ ನಿಮ್ಮ ಗೆಳೆಯರು ಕಣ್ಣಿಡಬಹುದಾಗಿದೆ. ನೀವು ಯಾವ ಸಮಯದಲ್ಲಿ ಆನ್’ಲೈನ್’ನಲ್ಲಿದ್ದಿರಿ. ನೀವು ಎಷ್ಟು ಸಮಯ ವಾಟ್ಸಾಪ್’ನಲ್ಲಿ ಕಳೆಯುತ್ತೀರಿ ಈ ರೀತಿಯಾದ ಅನೇಕ ಮಾಹಿತಿಯನ್ನು ಈ App ನೀಡುತ್ತದೆ.

loader