ಯಮಹಾ ಮೋಟಾರು ಸಂಸ್ಥೆ ನೂತನ ರೇ ZR ಸ್ಟ್ರೀಟ್ ರ‍್ಯಾಲಿ ಸ್ಕೂಟರ್ ಬಿಡುಗಡೆ ಮಾಡಿದೆ. ಆಧುನಿಕ ತಂತ್ರಜ್ಞಾನ ಹಾಗೂ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿರುವು ನೂತನ ಸ್ಕೂಟರ್ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಜು.16): ಯಮಹಾ ಮೋಟಾರು ಭಾರತದಲ್ಲಿ ನೂತನ ಸ್ಕೂಟರ್ ಲಾಂಚ್ ಮಾಡಿದೆ. ಯಮಹಾ ರೇ ZR ಸ್ಟ್ರೀಟ್ ರ‍್ಯಾಲಿ ಸ್ಕೂಟರ್ ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಹಿಂದೆ ಯಮಹಾ ಪರಿಚಯಿಸಿದ್ದ ರೇ ZR ಮಾಡೆಲ್‌ನ್ನ ಆಧುನಿಕರಣ ಗೊಳಿಸಿ ಬಿಡುಗಡೆ ಮಾಡಲಾಗಿದೆ.

ಯಮಹ ರೇ ZR ಸ್ಟ್ರೀಟ್ ರ‍್ಯಾಲಿ ಸ್ಕೂಟರ್ ಬೆಲೆ 57,898 ರೂಪಾಯಿ(ಎಕ್ಸ್ ಶೋರೂಂ). ವಿಂಗ್ ಸ್ಟೈಲ್ ಹಾಗೂ ಸ್ಪೋರ್ಟ್ಸ್ ಲುಕ್‌ನಲ್ಲಿ ಬಿಡುಗಡೆಯಾಗಿರೋ ಈ ನೂತನ ಸ್ಕೂಟರ್ ಹಲವು ವಿಶೇಷತೆಗಳನ್ನ ಹೊಂದಿದೆ.

ರೇ ZR ಹಾಗೂ ರೇ ZR ಸ್ಟ್ರೀಟ್ ರ‍್ಯಾಲಿ ಸ್ಕೂಟರ್ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಹೊರ ವಿನ್ಯಾಸ, ಗ್ರಾಫಿಕ್ಸ್ , ಹೆಡ್‌ಲೈಡ್ ಸೇರಿದಂತೆ ಕೆಲ ವಿಭಾಗದಲ್ಲಿ ಹೊಸತನ ತರಲಾಗಿದೆ. ರೆಡ್ ಹಾಗೂ ರೇಸಿಂಗ್ ಬ್ಲೂ ಎರಡು ಬಣ್ಣಗಳಲ್ಲಿ ನೂತನ ಸ್ಕೂಟರ್ ಲಭ್ಯವಿದೆ.

113 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್, 7.2 ಬಹೆಚ್‌ಪಿ ಹಾಗೂ 8.1 ಎನ್ಎಮ್ ಪೀಕ್ ಟಾರ್ಕ್ಯೂ ಹೊಂದಿದೆ. 170 ಎಮ್ಎಮ್ ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನ ಅಳವಡಿಸಲಾಗಿದೆ.