ಇನ್ನೈದು ದಿನ, ನಿಮ್ಮ ಕೈಗೆ Xiaomiಯ ಅಗ್ಗದ ಫೋನ್!

ಉತ್ತಮ ಗುಣಮಟ್ಟದ ಫೋನ್‌ಗಳ ಮೂಲಕ ಭಾರತದಲ್ಲಿ ಜನಪ್ರಿಯವಾಗಿರುವ Xiaomi ಕಂಪನಿಯು ಮತ್ತೊಂದು ಅಗ್ಗದ ಮೊಬೈಲ್ ಫೋನ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ಫೀಚರ್, ಬೆಲೆ ಮತ್ತು ಲಭ್ಯತೆ ಬಗ್ಗೆ ಇಲ್ಲಿದೆ ಮಾಹಿತಿ:
 

Xiaomi Redmi 7A Price Features Availability

ಬೆಂಗಳೂರು (ಜು. 06): ಅಗ್ಗದ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ Xiaomiಯ Redmi 7A ಇನ್ನು ಕೆಲವೇ ದಿನಗಳಲ್ಲಿ ಮೊಬೈಲ್ ಪ್ರಿಯರ ಕೈ ಸೇರಲಿದೆ.

HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, ಮತ್ತು 3GB RAM- 32GB ಸ್ಟೋರೆಜ್ ಹೊಂದಿರುವ ಈ ಹೊಸ ಸ್ಮಾರ್ಟ್‌ಫೋನ್ ಜು.11 ಮತ್ತು 12ರಂದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ mi.com ಹಾಗೂ mi ಸ್ಟೋರ್‌ಗಳಲ್ಲೂ ಇದನ್ನು ಖರೀದಿಸಬಹುದು.

Xiaomi Redmi 7A Price Features Availability

ಇದನ್ನೂ ಓದಿ | Xiaomiಯಿಂದ 2 ಹೊಸ ಫೋನ್‌ಗಳು ಬಿಡುಗಡೆ

ಕಡಿಮೆ ದರದ Samsung Galaxy M10 ಮತ್ತು Nokia 2.2 ಫೋನ್‌ಗಳು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದ್ದು, ಅವುಗಳಿಗೆ ಪೈಪೋಟಿ ನೀಡುವಂತಿದೆ Xiaomiಯ ಈ ಹೊಸ ಫೋನ್. 

5.45 ಇಂಚು ಪರದೆ, AI ಫೇಸ್ ಅನ್‌ಲಾಕ್,  12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು  4000 mAh ಬ್ಯಾಟರಿ ಈ ಫೋನ್‌ನ ಇನ್ನಿತರ ಪ್ರಮುಖ ಫೀಚರ್‌ಗಳು.

2 ವರ್ಷ ವ್ಯಾರಂಟಿ ಹೊಂದಿರುವ ಈ ಫೋನ್ ಬೆಲೆ ₹5999 ಆಗಿದೆ.

Latest Videos
Follow Us:
Download App:
  • android
  • ios