Online Job ಹೆಸರಿನಲ್ಲಿ ಯುವತಿಗೆ 1 ಲಕ್ಷ ಮೋಸ : ಇಂತಹ ಜಾಲಗಳಿಂದ ಬಚಾವ್‌ ಆಗೋದು ಹೇಗೆ? ಇಲ್ಲಿದೆ ಟಿಪ್ಸ್

ಭಾರಿ ಸಂಬಳದೊಂದಿಗೆ ಆನ್‌ಲೈನ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಂಚಕರು ನಾಗ್ಪುರದಲ್ಲಿ ಮಹಿಳೆಗೆ ₹1.13 ಲಕ್ಷ ವಂಚಿಸಿದ್ದಾರೆ. ಇಂತಹ ಜಾಲಗಳಿಂದ ಬಚಾವ್‌ ಆಗೋದು ಹೇಗೆ? ಇಲ್ಲಿದೆ ಟಿಪ್ಸ್!

Woman lost 1 lakh in Online job fraud How to Avoid fraudsters on internet tips mnj

Tech Desk: ಅಂತರ್ಜಾಲ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಅಂತರ್ಜಾಲವಮನ್ನೇ ಬಳಸಿ ಜನರಗೆ ಮೋಸ ಮಾಡುವ ವಂಚಕರ ಜಾಲಗಳು (Internet Fraud) ಇದೇ ವೇಗದಲ್ಲಿ ಬೆಳೆಯುತ್ತಿವೆ.  ದೊಡ್ಡ ಸಂಬಳದ ಆನ್‌ಲೈನ್ ಉದ್ಯೋಗದ (Online Job) ಭರವಸೆಯಿಂದ ಆಮಿಷಕ್ಕೆ ಒಳಗಾಗಿದ್ದ ಯುವತಿಯೊಬ್ಬಳು ವಂಚಕರಿಂದ ಒಂದು ಲಕ್ಷ ರೂಪಾಯಿಗಳನ್ನು ಈಗ ಕಳೆದುಕೊಂಡಿದ್ದಾಳೆ. ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಮತ್ತು ಫೋನ್‌ಗಳಲ್ಲಿ ಸ್ವೀಕರಿಸಿದ ಸಂದೇಶಗಳಿಗೆ ಉತ್ತರಿಸುವಾಗ ಮಾಡಬಾರದ ತಪ್ಪುಗಳನ್ನು ಮಾಡಿ ಯುವತಿ ಹಣ ಕಳೆದುಕೊಂಡಿದ್ದಾರೆ. 

ಭಾರಿ ಸಂಬಳದೊಂದಿಗೆ ಆನ್‌ಲೈನ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಂಚಕರು ನಾಗ್ಪುರದಲ್ಲಿ ಮಹಿಳೆಗೆ ₹1.13 ಲಕ್ಷ ವಂಚಿಸಿದ್ದಾರೆ. ಇದನ್ನು ಶನಿವಾರ ಪೊಲೀಸರು ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 4 ರಂದು ಅಪರಿಚಿತರಿಂದ ತನ್ನ ಫೋನ್‌ಗೆ ಸಂದೇಶ ಕಳುಹಿಸಲಾಗಿದೆ ಎಂದು 23 ವರ್ಷದ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಸಂದೇಶವನ್ನು ಕಳುಹಿಸಿದವರು ಇ-ಕಾಮರ್ಸ್ (E- Commerce) ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಾರೆ. ಮಹಿಳೆಗೆ ಆನ್‌ಲೈನ್ ಉದ್ಯೋಗ ಭರವಸೆ ನೀಡಲಾಗಿತ್ತು ಜತೆಗೆ  ಆಕೆಗೆ ಆಕರ್ಷಕ ವೇತನದ ಭರವಸೆಯನ್ನೂ ವಂಚಕರೂ ನೀಡಿದ್ದರು ಎಂದು  ತಿಳಿದುಬಂದಿದೆ. 

ಯುವತಿಗೆ ವಂಚಿಸಿದ್ದ ಹೇಗೆ?

ವಂಚಕರು  ಬರೊಬ್ಬರಿ ದಿನಕ್ಕೆ ₹5,000 ಸಂಬಳದ ಭರವಸೆ ನೀಡಿದ್ದಾರೆ. ಯುವತಿಗೆ ಸಂದೇಶ ಕಳುಹಿಸಿದ ವಂಚಕರು ಸಂದೇಶದಲ್ಲಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಲು ಹೇಳಿದ್ದಾರೆ. ಹಾಗೆ ಮಾಡುವಾಗ, ಅದು ಆನ್‌ಲೈನ್ ಪುಟವೊಂದನ್ನು ತೆರೆದಿದೆ. ಪುಟದಲ್ಲಿ ಹಲವು ವಿವರಗಳೊಂದಿಗೆ ನೋಂದಾಯಿಸಲು ವಿನಂತಿಸಲಾಗಿದೆ. ಈ ಹಂತವಿಲ್ಲದೆ, ಅವಳ ಕೆಲಸವನ್ನು ಒದಗಿಸುವ ಪ್ರಕ್ರಿಯೆಯು ಪೂರ್ಣಗೊಳ್ಳುವುದಿಲ್ಲವೆಂದು ಹೇಳಿ ನೋಂದಣಿಗೆ ಆಕೆ ನಿರ್ದಿಷ್ಟ ಮೊತ್ತದ ಹಣವನ್ನು ಪಾವತಿಸಬೇಕು ಎಂದು ತಿಳಿಸಲಾಗಿದೆ

ಇದನ್ನು ನಂಬಿದ ಯುವತಿ ಹಣವನ್ನು ಪಾವತಿಸಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾಳೆ. ಆದರೆ  ಇದಾದ ನಂತರ ಹೆಚ್ಚಿನ ಹಣಕ್ಕಾಗಿ ವಿನಂತಿಗಳು ಬರುತ್ತಲೇ ಇದ್ದವು ಮತ್ತು ಇದು ವಂಚಕರ ಜಾಲ ಎಂದು ಅರಿಯದೇ ಯುವತಿ ಹಣ  ಪಾವತಿಸಿದ್ದಾಳೆ. ಆದರೆ ಒಂದು ಹಂತದಲ್ಲಿ ಸಂದೇಹ ಬಂದು ಪೋಲಿಸ್‌ ಠಾಣೆಗೆ ದೂರು ನೀಡಿದ್ದಾಳೆ. ಪೋಲಿಸರಯ ವಂಚಕರ ವಿರುದ್ಧ ಐಪಿಸಿ ಸೆಕ್ಷನ್ 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್ ವಂಚನೆಗಳನ್ನು ಹೇಗೆ ನಿಲ್ಲಿಸುವುದು?

ಭಾರತದಲ್ಲಿ  ಡಿಜಿಟಲ್ ಕ್ರಾಂತಿ ಆಗುತ್ತಿದೆ ಜತೆಗೆ ವರ್ಕ್‌ ಫ್ರಾಮ್‌ ಹೋಮ್ (WFH) ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ, ಅಪರಾಧಿಗಳು ಸಹ ಸೈಬರ್ ಅಪರಾಧಗಳ ಮೂಲಕ ಹಣವನ್ನು ಕದಿಯಲು ಬಲಿಪಶುಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಜನರು ಆನ್‌ಲೈನ್ ವಂಚನೆಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಈ ಬೆನ್ನಲ್ಲೇ ನೀವು ಗಮನಹರಿಸಬೇಕಾದ ಕೆಲವು ಅಂಶಗಳ ಇಲ್ಲಿವೆ

1. ಅಪರಿಚಿತರು ನಿಮಗೆ ಕಳುಹಿಸಿದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ನಿಮಗೆ ಪರಿಚಯವಿಲ್ಲದ ವೆಬ್‌ಸೈಟ್‌ಗಳಿಗೆ ಸ್ನೇಹಿತರು ಮತ್ತು ಕುಟುಂಬದವರು ಫಾರ್ವರ್ಡ್ ಮಾಡಿದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಈ ಲಿಂಕ್‌ಗಳನ್ನು ಸೈಬರ್ ಅಪರಾಧಿಗಳು ಕಳುಹಿಸಿರಬಹುದು ಮತ್ತು ಯಾರೂ ಅವುಗಳ ಮೇಲೆ ಕ್ಲಿಕ್ ಮಾಡಬಾರದು.

2. ನೀವು ಅಂತಹ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಮತ್ತು ಅತ್ಯಂತ ಪ್ರಮುಖವಾದ ಇ-ಕಾಮರ್ಸ್ ವೆಬ್‌ಸೈಟ್, ಬ್ಯಾಂಕ್ ಅಥವಾ ಇತರ ಅತ್ಯಂತ ಜನಪ್ರಿಯ ಕಾರ್ಪೊರೇಟ್ ಘಟಕದಂತೆ ಕಾಣುವ ವೆಬ್‌ಸೈಟ್‌ ಭೇಟಿ ನೀಡಿದರೆ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಇದು ನೈಜ ಕಂಪನಿಗಳು ಮತ್ತು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಲಾದ ನಕಲಿ ವೆಬ್‌ಸೈಟ್.

3. ದುರಾಸೆ ಬೇಡ. ಆದ್ದರಿಂದ, ಬಹಳ ಆಕರ್ಷಕವಾದ ವೇತನವನ್ನು ಹೊಂದಿರುವ ಆದರೆ ಸಾಕಷ್ಟು ಅವಾಸ್ತವಿಕವಾಗಿರುವ ಅಪರಿಚಿತರ ಉದ್ಯೋಗದ ಭರವಸೆಗಳನ್ನು ನಂಬಬೇಡಿ. ಹೀಗಿರುವಾಗ ದಿನಕ್ಕೆ ₹5000 ತತ್‌ಕ್ಷಣವೇ ಅನುಮಾನ ಹುಟ್ಟಿಸಿರಬೇಕು.

4. ನಿಮ್ಮ ಬ್ಯಾಂಕ್ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ಸೇರಿಸಲು ಅಗತ್ಯವಿರುವ ವೆಬ್‌ಸೈಟ್‌ಗಳಲ್ಲಿ ಯಾವುದೇ ಆನ್‌ಲೈನ್ ಪಾವತಿಗಳನ್ನು ಮಾಡಬೇಡಿ. ಯಾವಾಗಲೂ ಮೊದಲು ಕಂಪನಿಯ URL ಅನ್ನು ಪರಿಶೀಲಿಸಿ. ಅಲ್ಲಿ ಲಾಕ್‌ನ ಚಿಹ್ನೆ ಇದೆಯೇ ಮತ್ತು URL ನಲ್ಲಿ 's' ಇದೆಯೇ ಎಂದು ನೋಡಿ. ಉದಾಹರಣೆಗೆ, https://. ಸಂಪರ್ಕವು ಸುರಕ್ಷಿತವಾಗಿದೆ ಎಂದು 's' ಸೂಚಿಸುತ್ತದೆ. ಇದು 's ಇಲ್ಲದೆ ಇದ್ದರೆ, ಈ ರೀತಿ, 'http://, ಆಗ ಅದು ಸುರಕ್ಷಿತವಲ್ಲ. ಹಾಗಾಗಿ ಅಂಥಹ ವೆಬ್‌ಸೈಟ್ ಗಳಿಂದ ದೂರ ಇರುವುದು ಒಳಿತಯ

5. ಈ ನಕಲಿ ವೆಬ್‌ಸೈಟ್‌ಗಳಲ್ಲಿ ಲಿಖಿತ ಪಠ್ಯದಲ್ಲಿ ಅತಿಯಾದ ಕಾಗುಣಿತ ಮತ್ತು ವ್ಯಾಕರಣದ ತಪ್ಪುಗಳನ್ನು ಯಾವಾಗಲೂ ಪರಿಶೀಲಿಸಿ. ಯಾವುದೇ ಕಾನೂನುಬದ್ಧ ವೆಬ್‌ಸೈಟ್ ಅನುಮತಿಸದ ಭಾಷೆ ಅಥವಾ ನಿಮಗೆ ಗೊತ್ತಿಲ್ಲದ ಭಾಷೆ ಹೊಂದಿದ್ದರೆ ಅಂಥಹ ವೆಬ್‌ಸೈಟ್ ಬಗ್ಗೆ ಜಾಗರೂಕರಾಗಿರಬೇಕು.

ಇದನ್ನೂ ಓದಿ:

1) Jio Happy New Year Offer: ₹2,545 ಪ್ರಿಪೇಯ್ಡ್ ರೀಚಾರ್ಜ್ ಮೇಲೆ 1 ತಿಂಗಳ ಎಕ್ಸ್ಟ್ರಾ ವ್ಯಾಲಿಡಿಟಿ!

2) Extensive Smartphone Use: ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಪೋಷಕರ ಅತಿಯಾದ ಸ್ಮಾರ್ಟ್ಫೋನ್ ಬಳಕೆ!

3) Diavol Virus: ಬಂದಿದೆ ದುಡ್ಡು ಕದಿಯುವ ಹೊಸ ಕಂಪ್ಯೂಟರ್‌ ಇ ಮೇಲ್‌ ವೈರಸ್‌!

Latest Videos
Follow Us:
Download App:
  • android
  • ios