ವಾಟ್ಸಾಪ್'ನಲ್ಲಿ ಕಳುಹಿಸಿ ಮೆಸೇಜ್'ಗಳನ್ನು ಡಿಲೀಟ್ ಮಾಡುವ ಕುರಿತಾದ ಟೆಸ್ಟಿಂಗ್ ಈ ವರ್ಷದ ಆರಂಭದಿಂದಲೇ ನಡೆಯುತ್ತಿದೆ. ಆದರೂ ಈವರೆಗೆ ಇದನ್ನು ಮೆಸೇಜಿಂಗ್ ಆ್ಯಪ್'ನ ಸ್ಟೇಬಲ್ ವರ್ಶನ್'ಲ್ಲಿ ಪರಿಚಯಿಸಿರಲಿಲ್ಲ. ಈ ಫೀಚರ್ ಮೂಲಕ ಚಾಟ್ ಮಾಡುವ ಸಂದರ್ಭದಲ್ಲಿ ನೀವು ಕಳುಹಿಸಿದ ಯಾವುದೇ ಮೆಸೇಜ್'ನ್ನು ಹಿಂಪಡೆಯಬಹುದಾಗಿದೆ. ಮೆಸೇಜ್ ಒಂದನ್ನು ಕಳುಹಿಸಿದ 5 ನಿಮಿಷದ ಅವಧಿಯೊಳಗೆ ನೀವು ಆ ಸಂದೇಶವನ್ನು ಹಿಂಪಡೆಯಬಹುದು. ಇನ್ನು ಮಾಧ್ಯಮವವೊಂದು ಬಿತ್ತರಿಸಿದ ವರದಿಯಲ್ಲಿ ವಾಟ್ಸಾಪ್ ಈ ಫೀಚರ್'ನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

ಇನ್ನು ವಾಟ್ಸಾಪ್ ಬೀಟಾ ಇನ್ಫೋ ಈ ಕುರಿತಾಗಿ ಟ್ವೀಟ್ ಮಾಡಿ ಆಯ್ದ ಕೆಲ ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್'ನ 2.17.30+ ವರ್ಶನ್'ನಲ್ಲಿ ಈ ಫೀಚರ್'ನ್ನು ಈಗಾಗಲೇ ಆ್ಯಕ್ಟವ್ ಮಾಡಲಾಗಿದೆ ಎಂದು ತಿಳಿಸಿದೆ. ಆದರೆ ಇದನ್ನು ಪ್ರತಿಯೊಬ್ಬ ವಾಟ್ಸಾಪ್ ಬಳಕೆದಾರರಿಗೆ ಅಧಿಕೃತವಾಗಿ ಬಳಸಲು ನೀಡಲಾಗುತ್ತದೆ ಎಂಬುವುದನ್ನು ಇದು ಖಚಿತಪಡಿಸಿಲ್ಲ.
ಇನ್ನು ಈ ಕುರಿತಾಗಿ ವರದಿ ಮಾಡಿರುವ ಟಿಪ್ಸ್ಟರ್ 'ಸ್ಟೇಟಸ್ ಫೀಚರ್ ಪರಿಚಯಿಸಿದ ಬಳಿಕ ಕಾಂಟಾಕ್ಸ್ ಟ್ಯಾಬ್'ನ್ನು ತೆಗೆಯಲಾಗಿತ್ತು. ಆದರೆ ವಾಟ್ಸಾಪ್ ಇದನ್ನು ಮತ್ತೆ ಪರಿಚಯಿಸುತ್ತಾರೆ ಎಂದು ತಿಳಿಸಿದೆ. ಈ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಿರುವ ವಾಟ್ಸಾಪ್ ಬೀಟಾ ಇನ್ಫೋ ಕಾಂಟಾಕ್ಟ್ಸ್ ಸೆಕ್ಷನ್'ನ್ನು ಸ್ಟೇಟಸ್ ಬಾರ್'ನಲ್ಲೇ ಪರಿಚಯಿಸುತ್ತಾರೆ ಎಂಬುವುದಾಗಿ ತಿಳಿಸಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಪ್ರಯೋಗ ನಡೆಯುತ್ತಿದೆ ಎಂದಿದೆ.
ಅದೇನಿದ್ರೂ ವಾಟ್ಸಾಪ್ ಪರಿಚಯಿಸಲಿರುವ ಈ ನೂತನ ಫೀಚರ್'ನಿಂದ ಅವಸರದಲ್ಲಿ ಯಾರ್ಯಾರಿಗೋ ಮೆಸೇಜ್ ಕಳುಹಿಸುವವರಿಗೆ ಬಿಗ್ ರಿಲೀಫ್ ಸಿಗಲಿದೆ.
ಕೃಪೆ: NDTv