ವಾಟ್ಸಾಪ್ ತನ್ನೆಲ್ಲಾ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಕೊನೆಗೂ ಹೊಸದಾದ ಫೀಚರ್ 'ಪಿನ್ ಚಾಟ್ ಫೀಚರ್'ನ್ನು ಜಾರಿಗೊಳಿಸಿದೆ. ಈ ಮೊದಲು ಈ ಅದ್ಭುತ ಫೀಚರ್'ನ್ನು ಆ್ಯಂಡ್ರಾಯ್ಡ್ ಬೀಟಾ ವರ್ಶನ್'ನಲ್ಲಿ ಪರಿಚಯಿಸಿತ್ತು. ಇದೀಗ ವಾಟ್ಸಾಪ್ ಈ ಫೀಚರ್'ನ್ನು ಪ್ರತಿಯೊಬ್ಬ ಬಳಕೆದಾರರಿಗೂ ಬಳಸುವ ಸೌಲಭ್ಯ ಕಲ್ಪಿಸಿದೆ, ಇದರಿಂದ ಬಳಕೆದಾರರು ತನ್ನ ನೆಚ್ಚಿನ ಚಾಟ್'ಗಳನ್ನು 'ಚಾಟ್ ಟ್ಯಾಬ್'ನಲ್ಲಿ ಪಿನ್ ಮಾಡಬಹುದಾಗಿದೆ. ಮಾಡಿರುವ ಚಾಟ್'ಗಳಲ್ಲಿ ಯಾವುದಾದರೂ ಮೂರು ನೆಚ್ಚಿನ ಚಾಟ್'ಗಳನ್ನು ಎಲ್ಲಕ್ಕಿಂತ ಮೇಲೆ ಪಿನ್ ಮಾಡಿಟ್ಟುಕೊಳ್ಳಬಹುದು.

ಈ 'ಪಿನ್ ಚಾಟ್' ಎಂಬ ಹೊಸ ಫೀಚರ್'ನ್ನು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಪರಿಚಯಿಸಿದ ವಾಟ್ಸಾಪ್ 'ಪಿನ್ ಚಾಟ್ ಬಂದಿರುವುದರಿಂದ ನೀವೀಗ ನಿಮ್ಮ ಮನೆಯವರಿಗೆ ಇಲ್ಲವೇ ಬೆಸ್ಟ್ ಫ್ರೆಂಡ್'ಗೆ ಮೆಸೇಜ್ ಮಾಡಲು ಉದ್ದದ ಲಿಸ್ಟ್'ನ್ನು ಸ್ಕ್ರಾಲ್ ಮಾಡಿ ಅವರ ಹೆಸರು ಹುಡುಕಬೇಕಾದ ಅಗತ್ಯವಿಲ್ಲ. ಬಳಕೆದಾರರು ತಮ್ಮ ಚಾಟ್ ಲಿಸ್ಟ್'ನ್ನು ಸುಲಭವಾಗಿ ಬಳಸಲು ಪ್ರಮುಖ ಮೂರು ಚಾಟ್ ಇಲ್ಲವೇ ಗ್ರೂಪ್'ಗಳನ್ನು ಗುರುತಿಸಿ ಎಲ್ಲಕ್ಕಿಂತ ಮೇಲೆ ಪಿನ್ ಮಾಡಿಟ್ಟುಕೊಳ್ಳಬಹುದು. ಹೀಗೆ ಮಾಡಲು ಯಾವುದಾದರೂ ಚಾಟ್'ನ್ನು ಲಾಂಗ್ ಪ್ರೆಸ್ ಮಾಡಿಟ್ಟುಕೊಳ್ಳಿ ಈ ವೇಳೆ ಸ್ಕ್ರೀನ್'ನಲ್ಲಿ ಎಲ್ಲಕ್ಕಿಂತ ಮೇಲೆ ಕಂಡುಬರುವ ಪಿನ್ ಐಕಾನ್'ನ್ನು ಒತ್ತಿ' ಎಂದು ತಿಳಿಸಿದೆ.
ಆದರೆ ಈ ಪಿನ್ ಚಾಟ್ ಮೂಲಕ ಕೇವಲ ಮೂರು ಚಾಟ್'ಗಳನ್ನಷ್ಟೇ ಪಿನ್ ಮಾಡಿಕೊಳ್ಳಬಹುದು ಎಂಬುವುದೇ ನಿರಾಶಾದಾಯಕ ವಿಚಾರವಾಗಿದೆ. ನಾಲ್ಕನೇ ಚಾಟ್ ಪಿನ್ ಮಾಡಿದರೆ 'ನಿಮಗೆ ಕೇವಲ ಮೂರು ಚಾಟ್'ಗಳನ್ನಷ್ಟೇ ಪಿನ್ ಮಾಡಲು ಸಾಧ್ಯ' ಎಂಬ ಸೂಚನೆ ಕಂಡು ಬರುತ್ತದೆ. ಲಾಂಗ್ ಪ್ರೆಸ್ ಮಾಡುವ ಮೂಲಕ ಕೇವಲ ಪಿನ್ ಮಾಡುವುದಷ್ಟೇ ಅಲ್ಲದೇ ಯಾವುದೇ ಚಾಟ್'ನ್ನು ಡಿಲೀಟ್, ಮ್ಯೂಟ್ ಹಾಗೂ ಆರ್ಕೈವ್ ಕೂಡಾ ಮಾಡಬಹುದಾಗಿದೆ.
ಒಂದು ಬಾರಿ ಪಿನ್ ಮಾಡಿದ ಚಾಟ್ ನಿಮ್ಮ ಚಾಟ್ ಲಿಸ್ಟ್'ನಲ್ಲಿ ಎಲ್ಲಕ್ಕಿಂತ ಮೇಲೆ ಕಾಣಸಿಗುತ್ತದೆ ಎಂಬುವುದೇ ಈ ಹೊಸ ಫೀಚರ್'ನ ವಿಶೇಷ. ನಿಮ್ಮ ವಾಟ್ಸಾಪ್'ಗೆ ಅದೆಷ್ಟೇ ಮೆಸೇಜ್'ಗಳು ಬಂದರೂ ಅದೆಲ್ಲವೂ ಪಿನ್ ಮಾಡಿದ ಮೂರು ಚಾಟ್'ಗಳ ಬಳಿಕವೇ ಕಾಣಸಿಗುತ್ತವೆ. ಅಲ್ಲದೇ ಬಳಕೆದಾರರು ಪಿನ್ ಮಾಡಿದ ಚಾಟ್'ಗಳನ್ನು ತಮಗೆ ಬೇಡವೆನಿಸಿದಾಗ ನ್-ಪಿನ್ ಕೂಡಾ ಮಾಡಬಹುದಾಗಿದೆ. ಇದಕ್ಕಾಗಿ ಪಿನ್ ಮಾಡಿದ ಚಾಟ್ ಮೇಲೆ ಲಾಂಗ್ ಪ್ರೆಸ್ ಮಾಡಬೇಕು, ಹೀಗೆ ಮಾಡಿದಾಗ ನ್ ಪಿನ್ ಮಾಡುವ ಾಯ್ಕೆ ಕಂಡುಬರುತ್ತದೆ.
ಒಟ್ಟಾರೆಯಾಗಿ ಕಾಂಟ್ಯಾಕ್ಟ್ ಹಾಗೂ ಗ್ರೂಪ್'ಗಳು ದಿನೇ ದಿನೇ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಇಂತಹುದ್ದೊಂದು ಅದ್ಭುತ ಫೀಚರ್ ಪರಿಚಯಿಸಿದ್ದು ಹಲವರಿಗೆ ಖುಷಿ ತಂದುಕೊಟ್ಟಿದೆ.