ಸಂಕಟದಲ್ಲಿ ವಾಟ್ಸಪ್, ಫೇಸ್'ಬುಕ್ : ಆತಂಕಕ್ಕೆ ಏನು ಕಾರಣ ಗೊತ್ತೆ ?

First Published 7, Mar 2018, 6:08 PM IST
WhatsApp may be in trouble
Highlights

ತಮ್ಮ ಮೆಸೆಂಜರ್ ತಂತ್ರಜ್ಞಾನವನ್ನು ಕದ್ದು ಬಳಸಿಕೊಂಡಿದ್ದಾರೆ ಎಂದು ಅಮೆರಿಕಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ವಿಶ್ವದ ಪ್ರಬಲ ಸಾಮಾಜಿಕ ಮಾಧ್ಯಮ ಹಾಗೂ ವೇಗವಾಗಿ ಪ್ರಚಲಿತಗೊಳ್ಳುತ್ತಿರುವ ವಾಟ್ಸಪ್ ಮಾಧ್ಯಮಕ್ಕೆ ಸಂಕಟ ಎದುರಾಗಿದೆ.

ತಮ್ಮ ತಂತ್ರಜ್ಞಾನದ ಪೇಟೆಂಟ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರಮುಖ ಮೊಬೈಲ್ ಕಂಪನಿ ಬ್ಲ್ಯಾಕ್ ಬೆರ್ರಿ ದಾವೆ ಹೂಡಿದೆ. ತಮ್ಮ ಮೆಸೆಂಜರ್ ತಂತ್ರಜ್ಞಾನವನ್ನು ಕದ್ದು ಬಳಸಿಕೊಂಡಿದ್ದಾರೆ ಎಂದು ಅಮೆರಿಕಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ವಾಟ್ಸಪ್ ಮಾತ್ರವಲ್ಲದೆ ಫೇಸ್'ಬುಕ್ ಮೆಸೆಂಜರ್, ಇನ್ಸ್ಟ್'ಗ್ರಾಮ್, ವರ್ಕ್'ಪ್ಲೇಸ್ ಚಾಟ್  ಮೇಲೆಯೂ ಬ್ಲ್ಯಾಕ್ ಬೆರ್ರಿ ಕಂಪನಿ ಸಮರ ಸಾರಿದ್ದಾರೆ. ಇನ್'ಬಾಕ್ಸ್'ನಲ್ಲಿ ಮಲ್ಟಿಪಲ್ ಒಳಬರುವ ಮೆಸೇಜ್'ಗಳು,  ಅನ್'ರೀಡ್ ಮೆಸೇಜ್ ಇಂಡಿಕೇಟರ್, ಫೋಟೊ ಟ್ಯಾಗ್ ಮುಂತಾದ ತಂತ್ರಜ್ಞಾನಗಳನ್ನು ತಮ್ಮ ಸಂಸ್ಥೆಯಿಂದ ಕಳವು ಮಾಡಿದೆ ಎಂದು ಆರೋಪ ಮಾಡಿದೆ.

ತಮಗಾಗಿರುವ ನಷ್ಟವನ್ನು ತುಂಬಿಕೊಡಬೇಕೆಂದು ದಾವೆ ಹೂಡಿದೆ. ಕೆನಡಾ ಮೂಲದ ಬ್ಲ್ಯಾಕ್ ಬೆರ್ರಿ ಸಂಸ್ಥೆ ಈ ಹಿಂದೆ 2017ರಲ್ಲಿ ನೋಕಿಯಾ ಕಂಪನಿ ವಿರುದ್ಧವೂ ದಾವೆ ಹೂಡಿತ್ತು. ಮತ್ತೊಂದು ಕಂಪನಿ ಕ್ವಾಲಕಂ ವಿರುದ್ಧವೂ  940 ಮಿಲಿಯನ್ ಡಾಲರ್ ಪರಿಹಾರ ನೀಡಬೇಕೆಂದು ದಾವೆ ಹೂಡಿ ಮಧ್ಯಸ್ತಿಕೆಯಲ್ಲಿ  ವ್ಯಾಜ್ಯ ತೀರ್ಮಾನಗೊಂಡಿತ್ತು. ಬ್ಲ್ಯಾಕ್ ಬೆರ್ರಿ ಆರೋಪವನ್ನು ಫೇಸ್'ಬುಕ್ ಹಾಗೂ ವಾಟ್ಸ;ಪ್ ಸಂಸ್ಥೆಗಳು ನಿರಾಕರಿಸಿವೆ.

loader