ಫೇಸ್ ಬುಕ್ ಡಿಲೀಟ್ ಮಾಡಲು ಹೇಳಿದ ವಾಟ್ಸಾಪ್ ಸಹ ಸಂಸ್ಥಾಪಕ

WhatsApp Co Founder tells everyone to delete Facebook
Highlights

ವಿಶ್ವದಲ್ಲಿ ಅತ್ಯಂತ  ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣ ಫೇಸ್’ಬುಕ್ , ಚಾಟಿಂಗ್ ಸೈಟ್ ಆದ ವಾಟ್ಸಾಪ್’ನ್ನು 2014ರಲ್ಲಿ ಕೊಂಡುಕೊಂಡಿತು.

ವಾಷಿಂಗ್ಟನ್ : ವಿಶ್ವದಲ್ಲಿ ಅತ್ಯಂತ  ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣ ಫೇಸ್’ಬುಕ್ , ಚಾಟಿಂಗ್ ಸೈಟ್ ಆದ ವಾಟ್ಸಾಪ್’ನ್ನು 2014ರಲ್ಲಿ ಕೊಂಡುಕೊಂಡಿತು.

ವಾಟ್ಸಾಪ್  ಕೋ ಫೌಂಡರ್’ಗಳಾದ ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಕೂಡ  ಇದರ ಭಾಗವಾಗಿದ್ದರು. ಆದರೆ ಕೌಮ್ ಅವರೂ ಅದೇ ಸಂಸ್ಥೆಯಲ್ಲಿ ಮುಂದುವರಿದಿದ್ದರೆ ಬ್ರಿಯಾನ್ ಆಕ್ಟನ್ ಈ ವರ್ಷದ ಆರಂಭದಲ್ಲಿ ಸಂಸ್ಥೆ ತೊರೆದು ತಮ್ಮದೇ ಆದ ಹೊಸ ಸಂಸ್ಥೆಯೊಂದನ್ನು ಆರಂಭ ಮಾಡಿದರು. ಈ ನಿಟ್ಟಿನಲ್ಲಿ ಅವರು ಇದೀಗ ತಮ್ಮ ಫಾಲೋವರ್’ಗಳಿಗೆ ಫೇಸ್’ಬುಕ್ ಡಿಲೀಟ್ ಮಾಡುವಂತೆ ಹೇಳಿದ್ದಾರೆ.

ಆಕ್ಟನ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಲು ಇದು ಸಮಯ ಎಂದು ಹಾಕಿಕೊಂಡಿದ್ದಾರೆ. ಡಿಲೀಟ್ ಫೇಸ್’ಬುಕ್ ಎಂಬ ಹ್ಯಾಶ್ ಟ್ಯಾಗ್ ಹಾಕಿಕೊಂಡಿದ್ದಾರೆ. ಆದರೆ ಈ ಬಗ್ಗೆ ಮತ್ತೆ ಅವರು ಯಾವುದೇ ರೀತಿಯಾದ ಪ್ರತಿಕ್ರಿಯೆಯನ್ನು ನೀಡಿಲ್ಲ.

loader