ಮಾರ್ಚ್ 31ಕ್ಕೆ ಮುಗಿಯುತ್ತಿದೆ ಜಿಯೋ ಪ್ರೈಮ್ ಮೆಂಬರ್’ಶಿಪ್ ಮುಂದೇನು..?

technology | 3/26/2018 | 6:01:00 AM
sujatha A
Suvarna Web Desk
Highlights

ಕಳೆದ ವರ್ಷ ಆರಂಭವಾದ ರಿಲಾಯನ್ಸ್ ಜಿಯೋ ಸೇವೆ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿತ್ತು.

ಮುಂಬೈ : ಕಳೆದ ವರ್ಷ ಆರಂಭವಾದ ರಿಲಾಯನ್ಸ್ ಜಿಯೋ ಸೇವೆ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿತ್ತು.

ಇದಾದ ಬಳಿಕ ದೇಶದ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ವಿವಿಧ ರೀತಿಯಾದ ಆಫರ್ ನೀಡಲಾರಂಭಿಸಿತು. ಇದಾದ ಬಳಿಕ ರಿಲಾಯನ್ಸ್ ಜಿಯೋ ತನ್ನ ಸೇವೆಯನ್ನು ಮುಂದುವರಿಸುತ್ತಲೇ ಬಂದಿತ್ತು.

ಮುಕೇಶ್ ಅಂಬಾನಿ 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ ಕಾಲ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್ ನೀಡಿದ್ದರು.

ಅದಾದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಇದೀಗ  ರಿಲಾಯನ್ಸ್ ಜಿಯೋ ಸೇವೆ ಬಳಕೆದಾರರಿಗೆ ಎದುರಾಗಿದೆ. ಆದರೆ ಕಂಪನಿ ಶೀಘ್ರವೇ ಹೊಸದಾದ ಸೇವೆಯನ್ನು ಆರಂಭ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments 0
Add Comment