ಪಶ್ಚಿಮ ಬಂಗಾಳ ಹೆಸರು ಬದಲಾವಣೆ-ವಾಹನಗಳ ನಂಬರ್ ಪ್ಲೇಟ್ ಮೇಲೆ ಪರಿಣಾಮ?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 27, Jul 2018, 5:03 PM IST
West Bengal Name Change: How 'Bangla' Might Affect Car Number Plates
Highlights

ಪಶ್ಚಿಮ ಬಂಗಾಳ ರಾಜ್ಯ ತನ್ನ ಹೆಸರನ್ನ ಬಾಂಗ್ಲಾ ಎಂದು ಮರುನಾಮಕರಣಕ್ಕೆ ಹೊರಟಿದೆ. ರಾಜ್ಯದ ಹೆಸರು ಬದಲಾವಣೆಯಿಂದ ವಾಹನಗಳ ರಿಜಿಸ್ಟ್ರೇಶನ್, ನಂಬರ್ ಪ್ಲೇಟ್ ಮೇಲೆ ಯಾವ ಪರಿಣಾಮ ಬೀರಲಿದೆ. ಇಲ್ಲಿದೆ ಸಂಪೂರ್ಣ ವಿವರ.

ಕೋಲ್ಕತ್ತಾ(ಜು.27): ಪಶ್ಚಿಮ ಬಂಗಾಳ ರಾಜ್ಯ ತನ್ನ ಹೆಸರು ಬದಲಾವಣೆಗೆ ಸಜ್ಜಾಗಿದೆ. ಪಶ್ಚಿಮ ಬಂಗಾಳ ಹೆಸರಿನ ಬದಲು ಇದೀಗ ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಕೇಂದ್ರ ಸರ್ಕಾರದ ಅಂಕಿತಕ್ಕಾಗಿ ದೀದಿ ಸರ್ಕಾರ ಕಾಯುತ್ತಿದೆ.

ಪಶ್ಚಿಮ ಬಂಗಾಳ ಇನ್ಮುಂದೆ ಬಾಂಗ್ಲಾ ಅನ್ನೋ ಹೆಸರಿನಿಂದ ಕರೆಯಲ್ಪಡೋ ದಿನ ದೂರವಿಲ್ಲ. ಆದರೆ ಸಮಸ್ಯೆ ಇದಲ್ಲ. ಸದ್ಯ ಪಶ್ಚಿಮ ಬಂಗಾಳದ ವಾಹನ ರಿಜಿಸ್ಟ್ರೇಶನ್ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಪ್ರಶ್ನೆ ಇದೀಗ ಜನಸಾಮನ್ಯರನ್ನ ಕಾಡುತ್ತಿದೆ.

ಸದ್ಯ ಪಶ್ಚಿಮ ಬಂಗಾಳದ ವಾಹನಗಳ ರಿಜಿಸ್ಟ್ರೇಶನ್ ಡಬ್ಲ್ಯೂಬಿ(WB). ಆದರೆ ಬಾಂಗ್ಲಾ ಅನ್ನೋ ಮರುನಾಮಕರಣದಿಂದ ವಾಹನಗಳ ನಂಬರ್ ಪ್ಲೇಟ್ ಬದಲಾಗಲಿದೆ.  BA,BG ಅಥವಾ BL ಎಂದು ಬದಲಾಗೋ ಸಾಧ್ಯತೆ ಇದೆ. ಬಾಂಗ್ಲಾ ಸೂಕ್ತವಾಗಿರೋ ರಿಜಿಸ್ಟ್ರೇಶನ್ BA. ಹೀಗಾಗಿ ಪಶ್ಚಿಮ ಬಂಗಾಳ ಸರ್ಕಾರ BA ರಿಜಿಸ್ಟ್ರೇಶನ್‌ ಮಾಡಿಸಲು ಮುಂದಾಗಿದೆ.

ರಾಜ್ಯ ಮರುನಾಮಕರಣ ಮಾಡಿ ವಾಹನಗಳ ರಿಜಿಸ್ಟ್ರೇಶನ್ ಬದಲಾಗಿದ್ದು ಇದೇ ಮೊದಲಲ್ಲ. ಹಲವು ವರ್ಷಗಳ ಹಿಂದೆ ಉತ್ತರಾಂಚಲ್, ಉತ್ತರಾಖಂಡ್ ಆಗಿ ಬದಲಾಗಿತ್ತು. ಈ ವೇಳೆ UA ರಿಜಿಸ್ಟ್ರೇಶನ್ ನಿಂದ UK ರಿಜಿಸ್ಟ್ರೇಶನ್ ಮಾಡಲಾಗಿತ್ತು. ಆಂಧ್ರಪ್ರದೇಶದಿಂದ ತೆಲಂಗಾಣ ವಿಂಗಡನೆಯಾದಾಗ AP ರಿಜಿಸ್ಟೇಶನ್‌ನಿಂದ ತೆಲಂಗಾಣ ರಾಜ್ಯದ ವಾಹನಗಳು TS ಆಗಿ ಬದಲಾಗಿತ್ತು.

ರಾಜ್ಯ ಅಥವಾ ಪ್ರಾಂತ್ಯಗಳ ಮರುನಾಮಕರಣ ರಿಜಿಸ್ಟರ್ಡ್ ಆಗಿರೋ ವಾಹನಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನೂತನ ವಾಹನಗಳ ರಿಜಿಸ್ಟ್ರೇಶನ್ ಮಾತ್ರ ಹೊಸ ಹೆಸರಿನಲ್ಲಿ ದಾಖಲಾಗಲಿದೆ. ಸ್ವಾತಂತ್ರ್ಯ ಪೂರ್ವ ಪಶ್ಚಿಮ ಬಂಗಾಳ, ಬಾಂಬೆ ಪ್ರಾವಿನ್ಸ್ (BMC)ರಿಜಿಸ್ಟ್ರೇಶನ್ ನಲ್ಲಿ ವಾಹನಗಳ ರಿಜಿಸ್ಟ್ರೇಶನ್ ಮಾಡಲಾಗುತ್ತಿತ್ತು.  

ಹೊಸ ರಿಜಿಸ್ಟ್ರೇಶನ್‌ನಿಂದ ಒಂದು ಸಮಸ್ಯೆ ಎದುರಾಗಬಹುದು. ಒಂದೇ ನಂಬರ್ ಎರಡು ವಾಹನಗಳಲ್ಲಿ ಬಳಕೆಯಾಗಬಹುದು. ನಂಬರ್ ಒಂದೇ ಆದರೂ ರಿಜಿಸ್ಟ್ರೇಶನ್ ಬೇರೆ ಇರಲಿದೆ. ಈ ಸಮಸ್ಯೆ ಹೊರತು ಪಡಿಸಿದರೆ, ಮರುನಾಮಕರಣ ನಂಬರ್ ಪ್ಲೇಟ್ ಮೇಲೆ ಹೆಚ್ಚಿನ ಪರಿಣಾಮ ಬೀರದು

loader