ದಿನದಿನಕ್ಕೂ ಕೂಡ ವಾಟ್ಸಾಪ್ ಹೊಸ - ಹೊಸ ರೀತಿಯಾದ ಅವಕಾಶಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದೀಗ ಮತ್ತೊಂದು ಹೊಸ ಆಪ್ಶನ್’ ವಾಟ್ಸಾಪ್’ನಲ್ಲಿ ಲಭ್ಯವಿದೆ. ನೀಮಗೆ ಬೇರೆಯವರು ಕಳುಹಿಸಿದ ಮೆಸೇಜ್’ನ್ನು ಓದಿದರೂ ಸಂದೇಶ ಕಳಿಸಿದವರಿಗೆ ಅದು ತಿಳಿಯದಂತೆ ಮಾಡಬಹುದಾಗಿದೆ.
ಬೆಂಗಳೂರು : ದಿನದಿನಕ್ಕೂ ಕೂಡ ವಾಟ್ಸಾಪ್ ಹೊಸ - ಹೊಸ ರೀತಿಯಾದ ಅವಕಾಶಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದೀಗ ಮತ್ತೊಂದು ಹೊಸ ಆಪ್ಶನ್’ ವಾಟ್ಸಾಪ್’ನಲ್ಲಿ ಲಭ್ಯವಿದೆ. ನೀಮಗೆ ಬೇರೆಯವರು ಕಳುಹಿಸಿದ ಮೆಸೇಜ್’ನ್ನು ಓದಿದರೂ ಸಂದೇಶ ಕಳಿಸಿದವರಿಗೆ ಅದು ತಿಳಿಯದಂತೆ ಮಾಡಬಹುದಾಗಿದೆ.
ಯಾವುದೇ ವ್ಯಕ್ತಿಯೂ ಕೂಡ ವಾಟ್ಸಾಪ್’ನಲ್ಲಿ ಸಂದೇಶವನ್ನು ಕಳುಹಿಸಿದಾಗ ಬೂದು ಬಣ್ಣದ ಮಾರ್ಕ್ ಕಾಣಿಸುತ್ತದೆ. ಅದು ನೀವು ಕಳಸಿದವರಿಗೆ ರೀಚ್ ಆದಾಗ 2 ಬೂದು ಬಣ್ಣದ ಮಾರ್ಕ್’ಗಳನ್ನು ಕಾಣಬಹುದಾಗಿದೆ. ಸಂದೇಶವನ್ನು ಓದಿದ ಬಳಿಕ ನೀಲಿ ಬಣ್ಣದ ಮಾರ್ಕ್’ಗಳು ಕಾಣಿಸುತ್ತವೆ. ಆದರೆ ನಿಮಗೆ ಬಂದ ಸಂದೇಶವನ್ನು ನೀವು ಓದಿದರೂ ನೀಲಿ ಬಣ್ಣದ ಮಾರ್ಕ್ ಬಾರದಂತೆ ಮಾಡಬಹುದಾಗಿದೆ.
ಆದರೆ ಈ ನೀವೊಮ್ಮೆ ಈ ಆಪ್ಶನ್ ಬಳಕೆ ಮಾಡಿದರೆ ನೀವು ಕಳಿಸಿದ ಸಂದೇಶವನ್ನೂ ಬೇರೆಯವರೂ ಓದಿದ್ದಾರೋ ಇಲ್ಲವೋ ಎನ್ನುವುದೂ ಕೂಡ ತಿಳಿಯುವುದಿಲ್ಲ. ಸೆಟ್ಟಿಂಗ್’ಗೆ ಹೋಗಿ ನಿರ್ಧಿಷ್ಟವಾದ ಆಫ್ಶನ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ನಿಮಗೆ ಸಂದೇಶ ಬಂದಾಗ ಮೊದಲು ನೋಟಿಫಿಕೇಶನ್ ಪ್ಯಾನಲ್’ಗೆ ಹೋಗಿ ಏರೋಪ್ಲೇನ್ ಮೋಡ್ ಆನ್ ಮಾಡಿ ಬಳಿಕ ಸಂದೇಶವನ್ನು ತೆರೆದು ಓದಿ – ಮತ್ತೆ ಈ ವಿಂಡೋವನ್ನು ಕ್ಲೋಸ್ ಮಾಡಿ ಬಳಿಕ ಏರೋಪ್ಲೇನ್ ಮೋಡ್ ಆಫ್ ಮಾಡಿ.
ಬ್ಯಾಕ್’ಗ್ರೌಂಡ್’ನಲ್ಲಿಯೂ ವಿಂಡೋ ಓಪನ್ ಇರದಂತೆ ನೋಡಿಕೊಂಡು ಬಳಿಕ ಏರೋಪ್ಲೇನ್ ಮೋಡ್ ಆಫ್ ಮಾಡಬೇಕು. ಆಗ ನೀವು ಸಂದೇಶ ಓದಿರುವ ಬಗ್ಗೆ ತಿಳಿಯುವುದಿಲ್ಲ.
